ಮನೆ ವ್ಯಕ್ತಿತ್ವ ವಿಕಸನ ನಿಮ್ಮ ಮನಸ್ಸನ್ನು ಸತತವಾಗಿ ಶುಚಿಗೊಳಿಸಿ

ನಿಮ್ಮ ಮನಸ್ಸನ್ನು ಸತತವಾಗಿ ಶುಚಿಗೊಳಿಸಿ

0

ಓರ್ವ ಯುವಕ ಸ್ನಾತಕೋತರ ಪದವಿ ಶಿಕ್ಷಣ ಮುಗಿಸಿದ ಬಳಿಕ ಉತ್ತಮ ಉದ್ಯೋಗಕ್ಕಾಗಿ ಬೇಟೆ ಆರಂಭಿಸಿದರು. ಆತ ತನ್ನ ಕ್ಷೇತ್ರದ ಶಾಸಕರನ್ನು ಭೇಟಿಯಾಗಿ ಮಂತ್ರಿಗೆ ಶಿಫಾರಸ್ಸು ಮಾಡುವಂತೆ ಕೋರಿದನು. ಶಾಸಕ ಅದಕ್ಕೂಪ್ಪಿ  ಮಂತ್ರಿಯ ಮನೆಗೆ ಕರೆದೊಯ್ಯುವುದಾಗಿ ಆ ಹುಡುಗನಿಗೆ ಭರವಸೆ ನೀಡಿದರು. ಮಾರ್ಗಮಧ್ಯೆ ಆ ಹುಡುಗನಿಂದ ಏನೋ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಶಾಸಕ ಅವನ ಕಾಲುಚೀಲಗಳು ಬಹಳ ಕೊಳಕಾಗಿರುವುದನ್ನು ಗುರುತಿಸಿದನು.ಆಗ ಆತನಿಗೆ ತನ್ನ ಮನೆಗೆ ವಾಪಸಾಗಿ ಕಾಲುಚೀಲ ಬದಲಿಸಿಕೊಂಡು ಮರುದಿನ ಬರುವಂತೆ ಶಾಸಕರು ಸೂಚಿಸಿದರು. ಯುವಕ  ಒಪ್ಪಿ  ಅದರಂತೆ ಮಾರನೆಯ ದಿನ ಮತ್ತೆ ಬಂದನು.ಆಗಲೂ ಆ ಹುಡುಗನ ಕಡೆಯಿಂದ ಕೆಟ್ಟವಾಸನೆ ಬರುತ್ತಿರುವುದನ್ನು ಕಂಡು ಶಾಸಕ ಅವಕ್ಕಾದರು.ಈ ಬಾರಿ ಅವರು ಸಿಟ್ಟಾಗಿ  “ನಾನು ನಿನಗೆ ಕಾಲುಚೀಲ ಬದಲಿಸಲು ತಿಳಿಸಿರಲಿಲ್ಲವೇ” ಎಂದು ಪ್ರಶ್ನಿಸಿದರು.

Join Our Whatsapp Group

   ಅದಕ್ಕೆ ಆ ಹುಡುಗ ಹೀಗೆ ಉತ್ತರಿಸಿದ್ದನು ನಾನು “ಹೊಸ ಕಾಲು ಚೀಲ  ಖರೀದಿಸಿ ಅವುಗಳನ್ನೇ ತೊಟ್ಟುಕೊಂಡಿದ್ದೇನೆ. ಇಗೋ ನೋಡಿ ಅದರ ಬಿಲ್ ಇಲ್ಲಿದೆ. ನೀವು ನನ್ನನ್ನು ನಂಬಲಾರಿರೆಂದು ನನಗೆ ಗೊತ್ತಿತ್ತು.  ಅದರಿಂದಲೇ……”

  ಪ್ರಶ್ನೆಗಳು

1. ಆ ಯುವಕ  ಶಾಸಕರಿಗೆ ಮುಂದೆ ಏನು ಹೇಳಿರಬಹುದು?

2. ಈ ಕಥೆಯ ಪರಿಣಾಮವೇನು?

 ಉತ್ತರಗಳು

1. “ನಾನು ನಿಮಗೆ ತೋರಿಸಲೆಂದೆ ಹಳೆಯ ಕಾಲುಚೀಲಗಳನ್ನು ಕೂಡಾ ತಂದಿದ್ದೇನೆ” ಎಂದು ಅವನು ಹೇಳಿದನು.

2. ನಾವು ನಮ್ಮ ಅಸಂತೋಷದ ಮನಸ್ಸನ್ನು ಈ ಕೊಳಕು ಕಾಲು ಚೀಲಗಳಿಗೆ ಹೋಲಿಸಬಹುದು. ನಿಮ್ಮ ಮನಸ್ಸು  ಅಸಂತುಷ್ಟವಾಗಿದ್ದರೆ ನೀವು ಸ್ವರ್ಗದಲ್ಲಿದ್ದರೂ ಕೂಡ ಶೋಕತಪ್ತ ಭಾವನೆಗಳೇ ಹೊರಹೂಮ್ಮತ್ತೆವೆ.ನಾವುಗಳು ಮನಸ್ಸನ್ನು ಪ್ರಾರ್ಥನೆ ಮತ್ತು ಧ್ಯಾನ್ಯದಿಂದ ಶುಚಿಗೊಳಿಸಿದಿದ್ದರೆ ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನುಬದಲಿಸುವುದು ಬಹಳ ಕಷ್ಟವಾಗುತ್ತದೆ.