ಮನೆ ರಾಜಕೀಯ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆರ್.ಧೃವನಾರಾಯಣ್  ಒತ್ತಾಯ

ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆರ್.ಧೃವನಾರಾಯಣ್  ಒತ್ತಾಯ

0

ಮೈಸೂರು(Mysuru): ಸಚಿವ ಈಶ್ವರಪ್ಪ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಕೂಡಲೇ ಕೆ.ಎಸ್ ಈಶ್ವರಪ್ಪ ನೈತಿಕತೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಆಗ್ರಹಿಸಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಕೂಡಲೇ ರಾಜ್ಯ ಸರ್ಕಾರ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯಬೇಕು. ರಾಜೀನಾಮೆ ಪಡೆಯದೇ ಸಚಿವ ಸ್ಥಾನದಲ್ಲಿ ಮುಂದುವರೆದರೆ ಸಾಕ್ಷಿ ನಾಶ ಸಂಭವ ಇರುತ್ತದೆ. ಒಮ್ಮ ಮಂತ್ರಿ ಮೇಲೆ ಎಫ್ ಐ ಆರ್ ದಾಖಲಾದರೆ, ಅಂತಹ ಆರೋಪ ಹೊತ್ತವರನ್ನು ಮುಂದುವರೆಸಿರೋ ನಿದರ್ಶನ ಇಲ್ಲ. ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಅವ್ರು ಇದು 40% ಕಮಿಷನ್ ಸರ್ಕಾರ ಅಂತಾ ಆರೋಪ ಮಾಡಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದರು. ಈಗ ಸಂತೋಷ್ ಆತ್ಮಹತ್ಯೆ ಇದಕ್ಕೊಂದು ಜೀವಂತ ಉದಾಹರಣೆ. ಇದೊಂದು ಭ್ರಷ್ಟ ಸರ್ಕಾರ ಅನ್ನೋದು ಸಾಬೀತು ಆಗಿದೆ ಎಂದು ಕಿಡಿಕಾರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದಿದ್ರು‌. ಆದರೆ ಈಗ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ. ಇದರ ಅರ್ಥ ಏನು..? ಕೂಡಲೇ ಈಶ್ವರಪ್ಪ ನೈತಿಕತೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಲಿ. ಗಣಪತಿ ಕೇಸ್ ನಲ್ಲಿ ಎಫ್ ಐ ಆರ್ ಆಗುತ್ತಿದ್ದಂತೆ ಗೃಹ ಸಚಿವ ಜಾರ್ಜ್ ರಾಜೀನಾಮೆ ಪಡೆಯಲಾಗಿತ್ತು. ಕ್ಲೀನ್ ಚಿಟ್ ಸಿಕ್ಕ ಬಳಿಕ ಮತ್ತೆ ಅವ್ರು ಮಂತ್ರಿಯಾದರು ಎಂದು ಹೇಳಿದರು.

ಈಶ್ವರಪ್ಪ ರಾಜೀನಾಮೆಗೆ ಶಾಸಕ ಅನಿಲ್ ಚಿಕ್ಕಮಾದು ಆಗ್ರಹ   : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿರುವ ಶಾಸಕ ಅನಿಲ್ ಚಿಕ್ಕಮಾದು, ಈಶ್ವರಪ್ಪ ಅವರ ಮೇಲೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ.ಈಶ್ವರಪ್ಪ ಅವ್ರು ಕೂಡಲೇ ರಾಜೀನಾಮೆ ನೀಡಲಿ. ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ಜಾರ್ಜ್ ಅವರು ಕೂಡಲೇ ರಾಜೀನಾಮೆ ನೀಡಿ ಹೊರಬಂದಿದ್ರು. ಈ ಪ್ರಕರಣದಲ್ಲೂ ಕೂಡ ಈಶ್ವರಪ್ಪ ರಾಜೀನಾಮೆ ನೀಡಲಿ‌ ಎಂದು ಒತ್ತಾಯಿಸಿದರು.

ಹಿಂದಿನ ಲೇಖನಸಚಿವ ಈಶ್ವರಪ್ಪ ಅವರನ್ನು ಕರೆಸಿ ಮಾತಾಡುವೆ: ಸಿಎಂ‌ ಬೊಮ್ಮಾಯಿ
ಮುಂದಿನ ಲೇಖನಭ್ರಷ್ಟಾಚಾರಕ್ಕೆ ಒಂದು ಜೀವ ಬಲಿ : ಭಾಸ್ಕರ್ ರಾವ್