ಮನೆ ರಾಜ್ಯ ಶಾಂತಿಯ ತೋಟದಲ್ಲಿ ‘ದ್ವೇಷದ ಮಾರುಕಟ್ಟೆ’ ಉದ್ಘಾಟನೆ ಮಾಡಿ ಹೋದ ರಾಹುಲ್ ಗಾಂಧಿ: ಬಿಜೆಪಿ ವಾಗ್ದಾಳಿ

ಶಾಂತಿಯ ತೋಟದಲ್ಲಿ ‘ದ್ವೇಷದ ಮಾರುಕಟ್ಟೆ’ ಉದ್ಘಾಟನೆ ಮಾಡಿ ಹೋದ ರಾಹುಲ್ ಗಾಂಧಿ: ಬಿಜೆಪಿ ವಾಗ್ದಾಳಿ

0

ಬೆಂಗಳೂರು: ಬೆಂಗಳೂರಿನಲ್ಲಿ ರಾಮನವಮಿ ಮುಗಿಸಿ ತೆರಳುತ್ತಿದ್ದ ಯುವಕರು ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಯುವಕರ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಲು ಮುಂದಾಗಿರುವ ವಿಚಾರವಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Join Our Whatsapp Group

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ​ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಉದ್ಘಾಟನೆ ಮಾಡಿ ಹೋದ ರಾಹುಲ್ ಗಾಂಧಿ ಎಂದು ಟೀಕಿಸಿದೆ.

‘ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ “ದ್ವೇಷದ ಮಾರುಕಟ್ಟೆ” ಉದ್ಘಾಟನೆ ಮಾಡಿ ಹೋಗಿದ್ದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬರುತ್ತಿದ್ದಂತೆ ಹಿಂದೂ ಯುವಕರ ಮೇಲೆ ಹಲ್ಲೆ ಆಗಿದೆ. ರಾಮ ನವಮಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ಮತಾಂಧ ಪುಂಡರು ಅವಾಚ್ಯ ಪದಗಳಿಂದ ನಿಂದಿಸಿ ಓಡಿ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಮತಾಂಧ ಶಕ್ತಿಗಳ ಕೈಗೆ ಕೊಟ್ಟು ಸುಳ್ಳು ಸುದ್ದಿ ಹರಡುವುದರಲ್ಲಿ ನಿರತವಾಗಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.

ರಾಹುಲ್ ಗಾಂಧಿ ಬುಧವಾರ ರಾಜ್ಯಕ್ಕೆ ಆಗಮಿಸಿ ಮಂಡ್ಯ ಮತ್ತು ಕೋಲಾರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿದ್ದಾರೆ.