ಮನೆ ಸುದ್ದಿ ಜಾಲ ಚೆನ್ನೈ ಮೇಯರ್ ಆಗಿ ಮೊದಲ ಬಾರಿಗೆ ದಲಿತ ಮಹಿಳೆ ಆಯ್ಕೆ

ಚೆನ್ನೈ ಮೇಯರ್ ಆಗಿ ಮೊದಲ ಬಾರಿಗೆ ದಲಿತ ಮಹಿಳೆ ಆಯ್ಕೆ

0

ಚೆನ್ನೈ,: ಮೊದಲ ಬಾರಿಗೆ ಚೆನ್ನೈನ ಮೇಯರ್ ಆಗಿ ದಲಿತ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ.

28 ವರ್ಷದ ಪ್ರಿಯಾ ಅವರನ್ನು ಮೇಯರ್ ಆಗಿ ಡಿಎಂಕೆ ಪಕ್ಷವು ಆಯ್ಕೆ ಮಾಡಿದೆ. ಈ ಮೂಲಕ ಮೇಯರ್ ಹುದ್ದೆಗೆ ಏರುತ್ತಿರುವ ಮೂರನೇ ಮಹಿಳೆ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಚೆನ್ನೈನ ಇತಿಹಾಸದಲ್ಲಿ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆ ಪ್ರಿಯಾ. ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿದೆ. ಹಾಗಾಗಿ ಪ್ರಿಯಾ ಶೀಘ್ರದಲ್ಲೇ ಮೇಯರ್ ಆಗಿ ಔಪಚಾರಿಕವಾಗಿ ಆಯ್ಕೆಯಾಗಲಿದ್ದಾರೆ.

ಚೆನ್ನೈನಲ್ಲಿ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಮತ್ತು ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಲಿಕೆಯಲ್ಲಿ 952, ಪುರಸಭೆಗಳಲ್ಲಿ 2,360 ಮತ್ತು ಪಟ್ಟಣ ಪಂಚಾಯಿತಿಯಲ್ಲಿ 4,389 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಚ್ಚರಿಯೆಂದರೆ, ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕೆ ಪಳನಿಸ್ವಾಮಿ (ಎಡಪ್ಪಾಡಿ, ಸೇಲಂ ಜಿಲ್ಲೆ) ಮತ್ತು ಓ ಪನ್ನೀರಸೆಲ್ವಂ (ಪೆರಿಯಕುಲಂ, ಥೇಣಿ ಜಿಲ್ಲೆ) ಸೇರಿದಂತೆ ಎಐಎಡಿಎಂಕೆ ನಾಯಕರ ತವರು ಜಿಲ್ಲೆಗಳೂ ಸೇರಿವೆ.

ಉತ್ತರ ಚೆನ್ನೈನ ತಿರುವಿ ಕಾ ನಗರದಿಂದ ಆರ್ ಪ್ರಿಯಾ ಟಿಎನ್ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 74 ರಿಂದ ಗೆದ್ದಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಡಿಎಂಕೆ ಬಹುಮತವನ್ನು ಗೆದ್ದುಕೊಂಡಿತು ಮತ್ತು 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯಿತಿಗಳಲ್ಲಿ ಜಯಗಳಿಸಿತು. ಮೇಯರ್ ಆಗಿ ಇದು ಪ್ರಿಯಾ ಅವರ ಮೊದಲ ಅಧಿಕೃತ ಹುದ್ದೆಯಾಗಿದೆ, ಆದರೂ ಅವರು 18ನೇ ವಯಸ್ಸಿನಿಂದ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದ್ದರಿಂದ ರಾಜಕೀಯದಲ್ಲಿ ತಮ್ಮ ಆಸಕ್ತಿ ಮತ್ತಷ್ಟು ಹೆಚ್ಚಾಯಿತು,ವಿದ್ಯುತ್, ನೀರು ಸೇರಿದಂತೆ ಇಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆ ಸಾಕಷ್ಟಿದೆ. ಅದನ್ನು ನಿವಾರಿಸಲು ನಾನು ಬಯಸುತ್ತೇನೆ ಎಂದು ಪ್ರಿಯಾ ಹೇಳಿದ್ದಾರೆ. ಪ್ರಿಯಾ ತಂದೆ ಆರ್ ರಾಜನ್ ಡಿಎಂಕೆಯ ಪ್ರದೇಶ ಸಹ ಕಾರ್ಯದರ್ಶಿಯಾಗಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್​ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಪ್ರತಾಪ್ ಸಿಂಹ
ಮುಂದಿನ ಲೇಖನಸಿಎಂ ಬೊಮ್ಮಾಯಿ ಅವರಿಂದ ನಾಳೆ ಚೊಚ್ಚಲ ಬಜೆಟ್ ಮಂಡನೆ