ಮನೆ ಅಪರಾಧ ರಾಯಚೂರು: ಹೃದಯ ಸಂಬಂಧಿ ಸಮಸ್ಯೆಯಿಂದ 14 ವರ್ಷದ ಬಾಲಕ ಸಾವು

ರಾಯಚೂರು: ಹೃದಯ ಸಂಬಂಧಿ ಸಮಸ್ಯೆಯಿಂದ 14 ವರ್ಷದ ಬಾಲಕ ಸಾವು

0

ರಾಯಚೂರು: ಸಿರವಾರ ತಾಲೂಕಿನ ಅತ್ತನೂರು ಗ್ರಾಮದ 14 ವರ್ಷದ ತರುಣ್ ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾನೆ.

Join Our Whatsapp Group

ತರುಣ್​ ಸಿರವಾರ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಎಂದಿನಂತೆ ತರುಣ ಬುಧವಾರ ಶಾಲೆಗೆ ಹೋಗಿದ್ದಾನೆ.

ತರಗತಿಯಲ್ಲಿ ಪಾಠ ಕೇಳುವಾಗ, ತಲೆ ಸುತ್ತು ಎನ್ನುತ್ತಾ ತರುಣ ಕುಸಿದು ಬಿದ್ದಿದ್ದಾನೆ. ಕೂಡಲೇ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವಿದ್ಯಾರ್ಥಿ ತರುಣ್ ​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಚಾರ ತಿಳಿದು ತರುಣ್​ ಪೋಷಕರು ಆಸ್ಪತ್ರೆಗ ದೌಡಾಯಿಸಿದ್ದಾರೆ. ವೈದ್ಯರು ತರುಣ್​ಗೆ ಲೋ ಬಿಪಿ ಆಗಿದೆ ಅಂತ ಹೇಳಿದ್ದಾರೆ.

ಬಳಿಕ, ವೈದ್ಯರು ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ತರುಣ್​ನನ್ನು ರಾಯಚೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ತರುಣ್​ ಮೃತಪಟ್ಟಿದ್ದಾನೆ. ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಾಗಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

 ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.