ಮನೆ ಸುದ್ದಿ ಜಾಲ ಕಾವೇರಿ ಜಲಾನಯನ ಪ್ರದೇಶಕ್ಕೆ ಕೃಪೆ ತೋರದ ಮಳೆರಾಯ: ಕುಸಿದ ಕೆಆರ್ ಎಸ್ ಡ್ಯಾಂ‌ ನೀರಿನ ಮಟ್ಟ

ಕಾವೇರಿ ಜಲಾನಯನ ಪ್ರದೇಶಕ್ಕೆ ಕೃಪೆ ತೋರದ ಮಳೆರಾಯ: ಕುಸಿದ ಕೆಆರ್ ಎಸ್ ಡ್ಯಾಂ‌ ನೀರಿನ ಮಟ್ಟ

0

ಮಂಡ್ಯ: ಕಾವೇರಿ ಜಲಾನಯನ ಪ್ರದೇಶಕ್ಕೆ ಮಳೆರಾಯ ಕೃಪೆ ತೋರದ ಕಾರಣ ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಮತ್ತೆ ಕುಸಿದಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

Join Our Whatsapp Group

ಸದ್ಯ ಡ್ಯಾಂನಲ್ಲಿ ಕೇವಲ 81 ಅಡಿ ನೀರು ಸಂಗ್ರಹವಿದ್ದು, ಕಾವೇರಿ ಒಡಲು ಬರಿದಾರುವ ಆತಂಕ ಎದುರಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಜಲಾಶಯದ ನೀರಿನ ಗರಿಷ್ಠ ಸಾಮರ್ಥ್ಯ  124.80 ಅಡಿ. ಆದರೆ ಈಗಿರುವ ನೀರಿನ ಪ್ರಮಾಣ 81.78 ಅಡಿ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 11.593 ಟಿಎಂಸಿ ನೀರು ಸಂಗ್ರಹವಿದೆ. 433 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಒಳ ಹರಿವಿಗಿಂತ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಡ್ಯಾಂನಿಂದ ನಾಲೆ ಸೇರಿದಂತೆ ನದಿಗೆ 3279 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಮತ್ತೆ ಸಂದಿಗ್ಧ ಪರಿಸ್ಥಿತಿಗೆ ಕಾವೇರಿ ನೀರಾವರಿ ನಿಗಮ ಸಿಲುಕಿದೆ. 11 ಟಿಎಂಸಿಯಲ್ಲಿ ಕೇವಲ 4 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿದ್ದು, ಉಳಿದ ಏಳು ಟಿಎಂಸಿ ನೀರು ಡೆಡ್ ಸ್ಟೋರೇಜ್(ಬಳಸಲು ಯೋಗ್ಯವಲ್ಲದ ನೀರು) ಆಗಿದೆ. ಇನ್ನು 2-3 ದಿನದಲ್ಲಿ ಮಳೆ ಸುರಿಯದಿದ್ದರೇ ನಾಲೆಗೆ ಬಿಡುತ್ತಿರುವ ನೀರು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಕೂಡ ಕೆ.ಆರ್.ಎಸ್ ಜಲಾಶಯದದಿಂದಲೇ ನೀರು ಪೂರೈಕೆಯಾಗುತ್ತಿದ್ದು, ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಹಿಂದಿನ ಲೇಖನಮುಂಗಾರು ಮಳೆ ವಿಳಂಬ: ಗ್ರಾಮಸ್ಥರಿಂದ ದೇವರಿಗೆ ಜಲದಿಗ್ಬಂಧನ
ಮುಂದಿನ ಲೇಖನಮೈಸೂರು: ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ