ಮನೆ ಸುದ್ದಿ ಜಾಲ ದೆಹಲಿ ಸೇರಿ ಪ್ರದೇಶದಾದ್ಯಂತ ಮಳೆ; ಕಾಶ್ಮೀರದಲ್ಲಿ ಹಿಮಪಾತ

ದೆಹಲಿ ಸೇರಿ ಪ್ರದೇಶದಾದ್ಯಂತ ಮಳೆ; ಕಾಶ್ಮೀರದಲ್ಲಿ ಹಿಮಪಾತ

0

ನವದೆಹಲಿ : ದೆಹಲಿ ಸೇರಿ ಎನ್‌ಸಿಆರ್‌ ಪ್ರದೇಶದಾದ್ಯಂತ ಇಂದು ಬೆಳಗ್ಗೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಬಲವಾದ ಗಾಳಿ ಬೀಸಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಹಿಮಾಲಯ ಪ್ರದೇಶದಲ್ಲಿ ಭಾರೀ ಹಿಮಪಾತ ಹಿನ್ನೆಲೆಯಲ್ಲಿ ಮಳೆಯಾಗಿದೆ.

ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಮಳೆಯಿಂದಾಗಿ ವಾಯುಮಾಲಿನ್ಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಬೆಳಗ್ಗೆ 4:50 ಕ್ಕೆ ಆರೆಂಜ್‌ ಅಲರ್ಟ್‌ ನೀಡಿದೆ. ದೆಹಲಿಯ ಅನೇಕ ಭಾಗಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ನರೇಲಾ, ಬವಾನಾ, ಅಲಿಪುರ್, ಬುರಾರಿ, ಕಂಝಾವಾಲಾ, ರೋಹಿಣಿ, ಬದ್ಲಿ, ಮಾಡೆಲ್ ಟೌನ್, ಆಜಾದ್‌ಪುರ, ಪಿತಾಂಪುರ, ಮುಂಡ್ಕಾ, ಪಶ್ಚಿಮ ವಿಹಾರ್, ಪಂಜಾಬಿ ಬಾಗ್, ರಾಜೌರಿ ಗಾರ್ಡನ್, ಜಾಫರ್‌ಪುರ್, ನಜಾಫ್‌ಗಢ್ ಮತ್ತು ದ್ವಾರಕಾ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಮಿಂಚು ಮತ್ತು ವೇಗವಾಗಿ ಬೀಸುವ ಗಾಳಿಯೊಂದಿಗೆ ಮಳೆಯಾಗಬಹುದು.

ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮತ್ತೊಮ್ಮೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮಳೆಯಿಂದಾಗಿ ತಾಪಮಾನ ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್ ಮತ್ತು ಕಾಶ್ಮೀರ ಕಣಿವೆಯ ಇತರ ಕೆಲವು ಪ್ರದೇಶಗಳಲ್ಲಿಯೂ ಹಿಮಪಾತವಾಗಿದ್ದು, ಶ್ರೀನಗರ ಮತ್ತು ಇತರ ಬಯಲು ಪ್ರದೇಶಗಳನ್ನು ಅತಿ ವೇಗದ ಗಾಳಿ ಬೀಸಿದೆ ಎಂದು ಹೇಳಲಾಗಿದೆ.