ಮನೆ ಅಪರಾಧ ಕೆರೂರಿನಲ್ಲಿ ಗಲಭೆ: ನಾಲ್ಕು ಪ್ರಕರಣ ದಾಖಲು, 18 ಮಂದಿ ವಶ

ಕೆರೂರಿನಲ್ಲಿ ಗಲಭೆ: ನಾಲ್ಕು ಪ್ರಕರಣ ದಾಖಲು, 18 ಮಂದಿ ವಶ

0

ಬಾಗಲಕೋಟೆ(Bagalakote): ಜಿಲ್ಲೆಯ ಕೆರೂರಿನಲ್ಲಿ ಬುಧವಾರ ಸಂಜೆ ನಡೆದ ಗಲಭೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಕೆರೂರಿನಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, 18 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ವರ್ಷ ವರಿಷ್ಠ ಜಯಪ್ರಕಾಶ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಕೆರೂರಿನಲ್ಲಿ ಬಿಗುವಿನ ವಾತಾವರಣವಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಂಗಡಿಗಳು ಬಂದ್ ಆಗಿದ್ದು, ಜನಸಂಚಾರವೂ ಕಡಿಮೆ ಇದೆ. ಯುವತಿಗೆ ಚುಡಾಯಿಸಿದಕ್ಕಾಗಿ ಗಲಾಟೆ ನಡೆದಿದೆಯೇ ಎಂಬುದರ ಬಗ್ಗೆ‌‌ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜನರು ಅನಾವಶ್ಯಕವಾಗಿ ಕಾನೂನು ಕೈಗೆ ತೆಗೆದುಕೊಳ್ಳಬಾರದು ಹಾಗೂ ಪೋಲಿಸ್ ಇಲಾಖೆಗೆ ಸಹಕರಿಸಬೇಕು. ಸಾಮಾಜಿಕ ಜಾಲ ತಾಣದಲ್ಲಿ ಯಾರೂ ಕೂಡ ತಪ್ಪು ಸಂದೇಶ ರವಾನೆ ಮಾಡಬಾರದು. ಇನ್ನಷ್ಟು ಆರೋಪಿಗಳ ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.

ಶಾಂತಿಗೆ ಸಿದ್ದರಾಮಯ್ಯ ಮನವಿ: ಯಾವುದೇ ವದಂತಿಗಳಿಗೆ ಗಮನ ನೀಡದೆ ಶಾಂತಿ ಕಾಪಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ಕೆ ಲ ವಿಚ್ಛಿದ್ರಕಾರಿ ಶಕ್ತಿಗಳು ಸಮಾಜದಲ್ಲಿ ಶಾಂತಿ ಕಾಪಾಡುವ ಪ್ರಯತ್ನ ನಡೆಸಿವೆ. ಸಾರ್ವಜನಿಕರು ಶಾಂತಿ ಸೌಹಾರ್ದತೆ ಕಾಪಾಡಬೇಕು. ಘಟನೆ ಸಂಬಂಧ ಜಿಲ್ಲಾ ಎಸ್ಪಿ ಅವರೊಂದಿಗೆ ದೂರವಾಣಿ ಮೂಲಕ ಮಾತುನಾಡಿದ್ದು, ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಶಿವಮೊಗ್ಗ:  ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದ ಶವ ಆಸ್ಪತ್ರೆಗೆ ರವಾನೆ
ಮುಂದಿನ ಲೇಖನಓಮಿಕ್ರಾನ್ ನ ಹೊಸ ಉಪತಳಿ ಬಿಎ.2.75 ತಳಿ ಭಾರತದಲ್ಲಿ ಪತ್ತೆ