ಬೆಂಗಳೂರು(Bengaluru): ನಗರದಲ್ಲಿ ಭಾರಿ ಮಳೆಯಿಂದಾಗಿ ಬಡಾವಣೆಗಳು ಜಲಾವೃತವಾಗಿ ಜನರು ತೊಂದರೆಗೊಳಗಾದ ಹಿನ್ನೆಲೆ ಎಚ್ಚೆತ್ತುಕೊಂಡಿರು ರಾಜ್ಯ ಸರ್ಕಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.
ಸೋಮವಾರ ನಗರದ ಮುನೇನಕೊಳಲು ಬಳಿ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಆರಂಭಿಸಿದ್ಧ ಬಿಬಿಎಂಪಿ ಅಧಿಕಾರಿಗಳು ಇಂದು 2ನೇ ದಿನವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮುನೇನಕೊಳಲು, ಶಾಂತಿನಿಕೇತನ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಗಿರುವ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ.
ತಹಶೀಲ್ದಾರ್ ನೊಟಿಸ್ ಕೊಟ್ಟ 3 ದಿನದ ಬಳಿಕ ಡೆಮಾಲಿಷನ್ ಮಾಡಬೇಕಾಗಿದ್ದು ಅಲ್ಲಿವರೆಗೂ ಕೇವಲ ಕಾಂಪೌಂಡ್ ಗೋಡೆ ಮಾತ್ರ ತೆರವು ಮಾಡುವಂತೆ ಜೆಸಿಬಿ ಚಾಲಕನಿಗೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
Saval TV on YouTube