ಮನೆ ರಾಷ್ಟ್ರೀಯ ಜ.5ರಂದು ರಾಜಸ್ಥಾನದ ಕರಣ್‌ ಪುರ ಕ್ಷೇತ್ರದ ಚುನಾವಣೆ: ಜ.8ರಂದು ಫಲಿತಾಂಶ

ಜ.5ರಂದು ರಾಜಸ್ಥಾನದ ಕರಣ್‌ ಪುರ ಕ್ಷೇತ್ರದ ಚುನಾವಣೆ: ಜ.8ರಂದು ಫಲಿತಾಂಶ

0

ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದಾಗಿ ಮುಂದೂಡಲಾಗಿದ್ದ ರಾಜಸ್ಥಾನದ ಕರಣ್‌ ಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಕುರಿತು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಈ ನಿರ್ದಿಷ್ಟ ಕ್ಷೇತ್ರದಲ್ಲಿ ಜನವರಿ 5ರಂದು ಮತದಾನ ನಡೆಯಲಿದ್ದು, ಜ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಡಿಸೆಂಬರ್ 12ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಡಿ.19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲನೆ ಡಿ.20ರಂದು ನಡೆಯಲಿದ್ದು, ಡಿ.22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್‌ ಮೀತ್ ಸಿಂಗ್ ಕೂನರ್ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮತದಾನವನ್ನು ಮುಂದೂಡಲಾಗಿತ್ತು.

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸ್ಥಾನಗಳ ಪೈಕಿ ಉಳಿದ 199 ಸ್ಥಾನಗಳಿಗೆ ನವೆಂಬರ್ 25ರಂದು ಮತದಾನ ನಡೆದಿತ್ತು. 115 ಸ್ಥಾನಗಳಲ್ಲಿ ಜಯ ಗಳಿಸಿದ್ದ ಬಿಜೆಪಿ ಅಧಿಕಾರ ಪಡೆದಿತ್ತು. ಮತ್ತೊಂದೆಡೆ 69 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ಗೆ ಅಧಿಕಾರ ನಷ್ಟವಾಗಿತ್ತು.

ಹಿಂದಿನ ಲೇಖನಶಿವಮೊಗ್ಗ: ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ
ಮುಂದಿನ ಲೇಖನಪೃಥ್ವಿಸಿಂಗ್‌ ಮೇಲಿನ ಹಲ್ಲೆ ವಿಚಾರದಲ್ಲಿ ಪೊಲೀಸರ ನಡೆ ಖಂಡನಾರ್ಹ: ರಮೇಶ ಜಾರಕಿಹೊಳಿ