ಮನೆ ಮನರಂಜನೆ ‘ತಲೈವರ್​ 170’ ಚಿತ್ರದ ರಜನಿಕಾಂತ್​ ಫಸ್ಟ್​ ಲುಕ್​ ಬಿಡುಗಡೆ

‘ತಲೈವರ್​ 170’ ಚಿತ್ರದ ರಜನಿಕಾಂತ್​ ಫಸ್ಟ್​ ಲುಕ್​ ಬಿಡುಗಡೆ

0

ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್​ 170’ ಎಂದು ಕರೆಯಲಾಗುತ್ತಿದೆ. ಅಮಿತಾಭ್​ ಬಚ್ಚನ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಮೂಲಕ ‘ತಲೈವರ್​ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್​’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ. ರಜನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಮಾತ್ರವಲ್ಲದೇ ರಾಣಾ ದಗ್ಗುಬಾಟಿ, ಫಹಾದ್ ಪಾಸಿಲ್​, ಮಂಜು ವಾರಿಯರ್​ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್​ ಕಡೆಯಿಂದ ಎಲ್ಲ ಕಲಾವಿದರ ಪೋಸ್ಟರ್ ​ಗಳನ್ನು ಬಿಡುಗಡೆ ಮಾಡಲಾಯಿತು. ಕೊನೆಯದಾಗಿ ರಜನಿಕಾಂತ್​ ಅವರ ಲುಕ್​ ಬಹಿರಂಗ ಆಗಿದೆ. ಬ್ಲಾಕ್​ ಆ್ಯಂಡ್​ ವೈಟ್​ ಥೀಮ್​ನಲ್ಲಿ ಈ ಪೋಸ್ಟರ್​ ವಿನ್ಯಾಸಗೊಂಡಿದೆ.

‘ಲೈಟ್ಸ್​, ಕ್ಯಾಮರಾ, ಕ್ಲ್ಯಾಪ್​ ಆ್ಯಂಡ್​ ಆ್ಯಕ್ಷನ್​. ರಜನಿಕಾಂತ್​ ಜೊತೆ ಇಡೀ ತಂಡ ಸಿದ್ಧವಾಗಿದೆ. ಇದು ಆ್ಯಕ್ಷನ್​ ಮೆರೆಯುವ ಸಮಯ. ಶೂಟಿಂಗ್​ ಶುರುವಾದ ಬಳಿಕ ಹೆಚ್ಚು ಅಪ್​ಡೇಟ್​ ನೀಡುತ್ತೇವೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿದೆ.

ಹಿಂದಿನ ಲೇಖನಉಜ್ವಲ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ: ಎಲ್ ​ಪಿಜಿ ಸಿಲಿಂಡರ್ ಸಬ್ಸಿಡಿ ದರ ಹೆಚ್ಚಳ
ಮುಂದಿನ ಲೇಖನಶಿವಮೊಗ್ಗ ಗಲಭೆ ನಿಯಂತ್ರಿಸಲು ಅಗತ್ಯ ಕ್ರಮ: ಎಡಿಜಿಪಿ ಅಲೋಕ್ ಮೋಹನ್