ಮನೆ ರಾಜ್ಯ ರಾಮಮಂದಿರ ಬಿಜೆಪಿಯವರಿಗೆ ತಿರುಗುಬಾಣವಾಗಲಿದೆ: ಸಿದ್ದರಾಮಯ್ಯ

ರಾಮಮಂದಿರ ಬಿಜೆಪಿಯವರಿಗೆ ತಿರುಗುಬಾಣವಾಗಲಿದೆ: ಸಿದ್ದರಾಮಯ್ಯ

0

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲಾಭವಾಗುತ್ತೆ ಎಂದು ಬಿಜೆಪಿ ಆತುರ ಆತುರದಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ಆದರೆ ಇದೇ ರಾಮಮಂದಿರ ಬಿಜೆಪಿಯವರಿಗೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯವಾಗಿ ಅನುಕೂಲ ಆಗುತ್ತೆ ಅಂತಾ ಆತುರವಾಗಿ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ರಾಮಂಮದಿರ ಪೂರ್ಣವಾಗಿ ನಿರ್ಮಾಣವಾಗಿಲ್ಲ. ರಾಮ ಮಂದಿರದಿಂದ ರಾಜಕೀಯ ಲಾಭ ಆಗುತ್ತೆ ಅನ್ನೋದು ಬಿಜೆಪಿಯವರ ಕನಸಿನ ಮಾತು ಇದರ ಬದಲಿಗೆ ರಾಮ ಮಂದಿರ ವಿಚಾರ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸಲಿದೆ ಜನ ಅಭಿವೃದ್ಧಿಕಾರ್ಯಗಳನ್ನು ಗಮನಿಸುತ್ತಿದ್ದಾರೆ ಜೊತೆಗೆ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದಾರೆ ಇದಕ್ಕೆ ಸರಿಯಾಗಿ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಜಾತಿ ಗಣತಿ ವರದಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಜಾತಿಗಣತಿ ವರದಿ ನನಗೆ ಗೊತ್ತಿಲ್ಲ. ವರದಿ ಕೊಡಕ್ಕೆ ಅವರು ಸಮಯಕ್ಕೆ ಕೇಳಿಲ್ಲ. ಕೇಳಿದ್ರೆ ಸಮಯಕೊಡುತ್ತೇವೆ, ನಂತರ ವರದಿ ಪಡೆಯುತ್ತೇವೆ ಯಾರು ಆ ವರದಿಯನ್ನ ನೋಡಿಲ್ಲ ಹೀಗಾಗಿ ಅದರ ಬಗ್ಗೆ ಏನು ಮಾತನಾಡಲು ಸಾಧ್ಯವಾಗಿಲ್ಲ ವರದಿ ಕೊಟ್ಟ ಬಳಿಕ ಪರಿಶೀಲನೆ ಕೂಡ ಇರುತ್ತದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಅವರು. ಬಿಜೆಪಿ ಸೇರುವ ವಿಚಾರದಲ್ಲಿ ಈಗಾಗಲೇ ಜಗದೀಶ್ ಶೆಟ್ಟರ್ ಉತ್ತರ ನೀಡಿದ್ದಾರೆ. ನನಗೆ ಅವಮಾನವಾಗಿರುವ ಪಕ್ಷಕ್ಕೆ ಹೋಗಲ್ಲ ಅಂತಾ ಹೇಳಿದ್ದಾರೆ ಅಲ್ಲೇ ಉತ್ತರ ಇದೆಯಲ್ವ. ಯಾರು ಎಷ್ಟೇ ಪ್ರಯತ್ನ ಮಾಡಿದ್ರು ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ ಎಂದು ಹೇಳಿದರು.

ನಿಗಮ ಮಂಡಳಿಗೆ ನೇಮಕಾತಿ ವಿಚಾರ ಕುರಿತು ಹೇಳಿಕೆ ನೀಡಿದ ಅವರು ಹೈಕಮಾಂಡ್ ನಿಗಮ ಮಂಡಳಿಗಳ ಪಟ್ಟಿಗೆ ಒಪ್ಪಿಗೆ ನೀಡಿದ ಬಳಿಕ ಪಟ್ಟಿ ಬಿಡುಗಡೆ ಮಾಡುತ್ತೇವೆ‌ ಎಂದು ಹೇಳಿಕೆ ನೀಡುವ ಮೂಲಕ ನಿಗಮ ಮಂಡಳಿಗಳ ಪಟ್ಟಿ ಹೈಕಮಾಂಡ್ ಬಳಿ ಇದೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು ಮಡಿದ ವಿಚಾರದ ಕುರುತು ಹೇಳಿಕೆ ನೀಡಿದ ಸಿಎಂ ‘ತಪ್ಪು ಮಾಡಿದಾಗ ಮಾತ್ರ ಎಫ್‌ಐಆರ್ ಹಾಕಬೇಕು. ಆದರೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದಾರೆ ರಾಹುಲ್ ಗಾಂಧಿ ಇದಕ್ಕೆಲ್ಲ ಕೇರ್ ಮಾಡಲ್ಲ ಎಂದು ಹೇಳಿದರು.

ಹಿಂದಿನ ಲೇಖನಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ
ಮುಂದಿನ ಲೇಖನಮಹಾಜನ ಸಂಸ್ಥೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮ ವೀಕ್ಷಕಣೆಗೆ ಅವಕಾಶ