ಮನೆ ರಾಜ್ಯ ಮೇ 3ಕ್ಕೆ ರಂಜಾನ್‌ ಆಚರಣೆ: ಕೇಂದ್ರೀಯ ಚಂದ್ರದರ್ಶನ ಸಮಿತಿ

ಮೇ 3ಕ್ಕೆ ರಂಜಾನ್‌ ಆಚರಣೆ: ಕೇಂದ್ರೀಯ ಚಂದ್ರದರ್ಶನ ಸಮಿತಿ

0

ಬೆಂಗಳೂರು- ಮಂಗಳವಾರ (ಮೇ 3 ರಂದು) ರಂಜಾನ್‌ (ಈದ್‌ ಉಲ್‌ ಫಿತ್ರ್‌) ಆಚರಿಸಲು ಕೇಂದ್ರೀಯ ಚಂದ್ರದರ್ಶನ ಸಮಿತಿ ನಿರ್ಧರಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದ್ದರಿಂದ ಚಂದ್ರ ಕಾಣಿಸಿಕೊಳ್ಳಲಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಮತ್ತು ದೇಶದ ಯಾವುದೇ ಭಾಗದಲ್ಲೂ ಕಾಣಿಸಲಿಲ್ಲ. ಹೀಗಾಗಿ ಮಂಗಳವಾರ ರಂಜಾನ್‌ ಆಚರಿಸಲು ಸಮಿತಿ ನಿರ್ಧರಿಸಿದೆ.

ರಂಜಾನ್‌ ತಿಂಗಳ ಉಪವಾಸ ಸೋಮವಾರಕ್ಕೆ ಕೊನೆಗೊಳ್ಳಲಿದೆ. ಚಂದ್ರ ಕಾಣಿಸಿಕೊಂಡಿದ್ದರೆ ಸೋಮವಾರವೇ ಈದ್‌ ಉಲ್‌ ಫಿತ್ರ್‌ ಆಚರಿಸಬೇಕಿತ್ತು. ರಾಜ್ಯ ಸರ್ಕಾರವೂ ಈಗಾಗಲೇ ಸೋಮವಾರದಂದು ಸರ್ಕಾರಿ ರಜೆಯನ್ನು ಘೋಷಿಸಿದೆ. ಆದರೆ, ಚಂದ್ರ ದರ್ಶನ ಆಗದ ಕಾರಣ 30ನೇ ದಿನದ ಉಪವಾಸ ಪೂರೈಸಿ, ಮರುದಿನ ಹಬ್ಬ ಆಚರಿಸಲಾಗುತ್ತಿದೆ.