ರಾಮನಗರ: ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಬಳಿ ಒಂಟಿ ಸಲಗವೊಂದು ತಡರಾತ್ರಿ ಕಾಣಿಸಿಕೊಂಡಿದ್ದು ಜನರಿಗೆ ಭಯ ಹುಟ್ಟಿಸಿದೆ.
ಸಾವನದುರ್ಗ ಕಾಡಿನಿಂದ ಮಾಗಡಿ ನಗರಕ್ಕೆ ಬಂದಿರುವ ಆನೆಯು ಪದೇ ಪದೇ ನಗರದ ಕಡೆ ಆಗಮಿಸುತ್ತಿದೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆಯ ಸಮಯದಲ್ಲಿ ಮತ್ತೆ ಕಾಣಿಸಿಕೊಂಡಿದೆ.
ತಕ್ಷಣವೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಒಂಟಿ ಸಲಗವಿದೆ ಯಾರು ಓಡಾಡಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದೆ. ಒಂಟಿ ಸಲಗ ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡಿಸುತ್ತಾರೆ.
Saval TV on YouTube