ಮನೆ ರಾಜ್ಯ ರಾಮನಗರ: ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ನೂರಾರು ಮರಗಳು, ಹಾರಿ ಹೋದ ಮೇಲ್ಛಾವಣಿ

ರಾಮನಗರ: ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ನೂರಾರು ಮರಗಳು, ಹಾರಿ ಹೋದ ಮೇಲ್ಛಾವಣಿ

0

ರಾಮನಗರ: ರಾಮನಗರ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ನೂರಾರು ಮರಗಳು ಧರೆಗುರುಳಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿ ಹೋದ ಘಟನೆಗಳು ಸಂಭವಿಸಿದೆ.

Join Our Whatsapp Group

ಚನ್ನಪಟ್ಟಣ ತಾಲೂಕಿನ ಕೊಂಡಾಪುರ, ಹುಣಸನಹಳ್ಳಿ, ಮೊಕರಂಬೆದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿರುಗಳಿ ಸಹಿತ ಮಳೆಯಾಗಿದೆ ಈ ವೇಳೆ ತೆಂಗು, ಮಾವು, ಹಲಸು ಸೇರಿದಂತೆ ನೂರಾರು ಮರಗಳು ಧರೆಗುರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಲ್ಲದೆ ಹಲವೆಡೆ ಬಿರುಗಾಳಿಗೆ ಮನೆಯ ಮೇಲ್ಛಾವಣಿಯೇ ಹಾರಿ ಹೋಗಿರುವ ಪ್ರಸಂಗ ನಡೆದಿದ್ದು ಮನೆಮಂದಿ ಆತಂಕಗೊಂಡಿದ್ದಾರೆ.

ಒಂದೆಡೆ ವರುಣ ದೇವನ ಕಂಡು ರೈತರು ಸಂತಸ ಪಟ್ಟರೆ ಮತ್ತೊಂಡೆದೆ ಬಿರುಗಾಳಿ ಅವಾಂತರಕ್ಕೆ ಜನ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ

ಬಿರುಗಾಳಿಯಿಂದ ಹಲವೆಡೆ ಕೃಷಿಕರ ಬೆಳೆಗಳು ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಹಿಂದಿನ ಲೇಖನಎರಡು ವಾಹನಗಳ ನಡುವೆ ಡಿಕ್ಕಿ: 6 ಮಂದಿ ಸಾವು, 7 ಮಂದಿಗೆ ಗಾಯ
ಮುಂದಿನ ಲೇಖನಮುಂಬಯಿ: ಜಾಹೀರಾತು ಫಲಕ ಬಿದ್ದ ಪ್ರಕರಣದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆ