ಮನೆ ಅಪರಾಧ ರಾಮನಗರ: ಪತ್ನಿಯನ್ನೇ ಹತ್ಯೆಗೈದು ಪರಾರಿಯಾದ ಪತಿ

ರಾಮನಗರ: ಪತ್ನಿಯನ್ನೇ ಹತ್ಯೆಗೈದು ಪರಾರಿಯಾದ ಪತಿ

0

ರಾಮನಗರ: ಪತಿಯೊರ್ವ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ಹತ್ಯೆಯಾದ ಮಹಿಳೆಯನ್ನು ಮಂಗಾಡಹಳ್ಳಿ ಗ್ರಾಮದ ಅಶ್ವಿನಿ (30) ಎನ್ನಲಾಗಿದ್ದು ಆರೋಪಿಯನ್ನು ಮಹಿಳೆಯ ಪತಿ ರಮೇಶ್ ಎನ್ನಲಾಗಿದೆ.

ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಪತ್ನಿ ಅಶ್ವಿನಿ ಮೇಲೆ ರಮೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಾರಿಯಾದ ಆರೋಪಿಯ ಶೋಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹಿಂದಿನ ಲೇಖನಮೈಸೂರು: ಮದ್ಯ ಮಾರಾಟ ನಿಷೇಧ
ಮುಂದಿನ ಲೇಖನಶಾಸಕರ ಧ್ವನಿ ಅಡಗಿಸಲು ಮುಂದಾಗುವುದು ಒಳ್ಳೆಯ ಬೆಳವಣಿಗೆಯಲ್ಲ: ಆರ್‌.ಅಶೋಕ