ಮನೆ ರಾಜ್ಯ ರಾಮನಗರ: ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ

ರಾಮನಗರ: ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ

0

ರಾಮನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ತಡರಾತ್ರಿ ಕಳ್ಳರು ಹುಂಡಿಯನ್ನು ಕದ್ದೊಯ್ದಿದ್ದಾರೆ.

ಬೀಗ ಒಡೆದು ದೇವಾಲಯದ ಒಳಕ್ಕೆ ನುಗ್ಗಿರುವ ಕಳ್ಳರು, ಹುಂಡಿಯನ್ನು ಎತ್ತಿಕೊಂಡು ಪಕ್ಕದ ಮಾವಿನ ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಹುಂಡಿ ಒಡೆದು ಅದರಲ್ಲಿದ್ದ ಸುಮಾರು ₹1 ಲಕ್ಷ ಹಣವನ್ನು ಒಯ್ದು ಹುಂಡಿಯನ್ನು ಅಲ್ಲೇ ಬಿಟ್ಟಿದ್ದಾರೆ.

ಕೃತ್ಯದ ಸಮಯದಲ್ಲಿ ದೇವಾಲಯದ ಕಿಟಕಿ ಗಾಜು  ಸಹ ಒಡೆದಿದ್ದು, ಪೂಜಾ ಸಾಮಾನು ಇಡುವ ಸ್ಥಳದಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ರಾಮನಗರ ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು–ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ದೇವಾಲಯದಲ್ಲಿ ಹಿಂದೆಯೂ ಎರಡ್ಮೂರು ಬಾರಿ ಬೀಗ ಒಡೆದು ಹುಂಡಿ ಕಳವು ಮಾಡಲಾಗಿತ್ತು. ಇದೀಗ, ಕೃತ್ಯ ಪುನರಾವರ್ತನೆಯಾಗಿದೆ. ಪೊಲೀಸರು ರಾತ್ರಿ ಈ ಭಾಗದಲ್ಲಿ ಸರಿಯಾಗಿ ಗಸ್ತು ತಿರುಗದಿರುವುದರಿಂದ ದೇವಾಲಯವು ಮದ್ಯವ್ಯವಸನಿಗಳು ಹಾಗೂ ಕಳ್ಳರ ತಾಣವಾಗಿದೆ. ಹಿಂದೆ ಹುಂಡಿ ಕಳವಾದ ಪ್ರಕರಣ ಇನ್ನೂ ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಿಂದಿನ ಲೇಖನರೈತನಿಗೆ ಮೆಟ್ರೋ ಪ್ರಯಾಣ ನಿರಾಕರಣೆ: ನಮ್ಮ ಮೆಟ್ರೋ ಸಿಬ್ಬಂದಿ ವಜಾ
ಮುಂದಿನ ಲೇಖನಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಹಿಂದೂಗಳ ಪೂಜೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ: ಮುಸ್ಲಿಂ ಬಣಕ್ಕೆ ಹಿನ್ನಡೆ