ಮನೆ ಕಾನೂನು ಅತ್ಯಾಚಾರ ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ

ಅತ್ಯಾಚಾರ ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ

0

ಮೈಸೂರು: ಅತ್ಯಾಚಾರವೆಸಗಿದ ಅಪರಾಧಿಗೆ ಮೈಸೂರಿನ ೭ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೦ ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಕೆ.ಆರ್.ನಗರ ತಾಲ್ಲೂಕಿನ ಸಾತಿಗ್ರಾಮದ ರವಿಕುಮಾರ್(೩೦) ಶಿಕ್ಷೆಗೆ ಒಳಗಾದ ಅಪರಾಧಿ.ಈತ ಸಂತ್ರಸ್ತ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡು ಆಕೆಯನ್ನು ಪುಸಲಾಯಿಸಿ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.ನಂತರ ಕೊಲೆ ಬೆದರಿಕೆ ಹಾಕಿದ್ದಾನೆ. ಈತನಿಂದ ವಂಚನೆಗೊಳಗಾದ ಮಹಿಳೆ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ಆಗಿನ ಆರಕ್ಷಕ ನಿರೀಕ್ಷಕರಾಗಿದ್ದ ರಘು ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಬಗ್ಗೆ ಆರೋಪಿಯ ವಿರುದ್ಧ ಮೈಸೂರಿನ ೭ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಯಶವಂತಕುಮಾರ್ ಅವರು, ಆರೋಪಿಯು ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ ಆತನ ವಿರುದ್ಧ ಸಾಕ್ಷಾಧಾರಗಳು ರುಜುವಾತಾಗಿದ್ದರಿಂದ ಅಪರಾಧಿಯೆಂದು ತೀರ್ಮಾನಿಸಿ, ಅತ್ಯಾಚಾರ ಮಾಡಿದ ಅಪರಾಧಕ್ಕೆ ೧೦ ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ, ೧೦ಸಾವಿರ ರೂ.ದಂಡ ವಿಧಿಸಿದೆ. ಕೊಲೆ ಬೆದರಿಕೆ ಹಾಕಿದ್ದ ಅಪರಾಧಕ್ಕಾಗಿ ಒಂದು ವರ್ಷದ ಸೆರೆಮನೆವಾಸ ಮತ್ತು ೫ಸಾವಿರ ರೂ.ದಂಡ ವಿಧಿಸಿ, ಸಂತ್ರಸ್ತೆಗೆ ೧ ಲಕ್ಷ ರೂ. ಪರಿಹಾರವನ್ನು ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾಗಿ ಕೆ.ನಾಗರಾಜ ವಾದ ಮಂಡಿಸಿದರು.

ಹಿಂದಿನ ಲೇಖನಐಟಿ ರೇಡ್ ಆದವರಿಗೆ ಬೆಲೆ ಜಾಸ್ತಿ: ಸಿ.ಎಂ.ಇಬ್ರಾಹಿಂ
ಮುಂದಿನ ಲೇಖನಕೆಟ್ಟದಾಗಿ ನಡೆಸಿಕೊಳ್ಳುವ ಸೊಸೆಯನ್ನು ಅತ್ತೆ ಮಾವ ಮನೆಯಿಂದ ಹೊರಹಾಕಬಹುದು: ದೆಹಲಿ ಹೈಕೋರ್ಟ್