ಮನೆ ಸುದ್ದಿ ಜಾಲ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿ ಐ ರೆಪೋ ದರ

ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿ ಐ ರೆಪೋ ದರ

0

ನವದೆಹಲಿ(New delhi): ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೆಪೊ ದರದಲ್ಲಿ ಬದಲಾವಣೆ ಮಾಡದಿರಲು ಶುಕ್ರವಾರ ನಿರ್ಧರಿಸಿದ್ದು, ಶೇಕಡ 4ರಷ್ಟು ರೆಪೊ ದರ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಪ್ರಕಟಿಸಿದ್ದಾರೆ.

2022–23ನೇ ಸಾಲಿನ ಮೊದಲ ದ್ವೈ ಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಪ್ರಕಟಿಸಿರುವ ಅವರು, ರಿವರ್ಸ್‌ ರೆಪೊ ದರದಲ್ಲೂ ಯಥಾಸ್ಥಿತಿ (ಶೇಕಡ 3.35) ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ.ರಷ್ಯಾ–ಉಕ್ರೇನ್‌ ಸಂಘರ್ಷ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಕಾರಣಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 5.7ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಹಣದುಬ್ಬರವು ಶೇಕಡ 4.5ರಷ್ಟಿರಲಿದೆ ಎಂದು ಫೆಬ್ರುವರಿಯಲ್ಲಿ ಅಂದಾಜಿಸಲಾಗಿತ್ತು.ಈ ಹಣಕಾಸು ವರ್ಷದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆ ದರ (ಜಿಡಿಪಿ) ಶೇಕಡ 7.2ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಜಿಡಿಪಿ ಶೇಕಡ 7.8ರಷ್ಟು ಇರಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು.

ಯುರೋಪ್‌ನ ಪರಿಸ್ಥಿತಿಯು (ರಷ್ಯಾ–ಉಕ್ರೇನ್‌ ಸಂಘರ್ಷ) ಜಾಗತಿಕ ಆರ್ಥಿಕತೆಯ ಹಳಿ ತಪ್ಪಿಸಬಹುದು’ ಎಂದು ಶಕ್ತಿಕಾಂತ್‌ ದಾಸ್‌ ಕಳವಳ ವ್ಯಕ್ತಪಡಿಸಿದ್ದಾರೆ.