ಮನೆ ಅಪರಾಧ ಎನ್‌ಎಸ್‌ಇ ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಐಟಿ ದಾಳಿ

ಎನ್‌ಎಸ್‌ಇ ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಐಟಿ ದಾಳಿ

0

ನವದೆಹಲಿಎನ್‌ಎಸ್‌ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ನಿವಾಸದ ಮೇಲೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಅಧಿಕೃತ ಮೂಲಗಳು ತಿಳಿಸಿವೆ.

ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈ ಮತ್ತು ಚೆನ್ನೈನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್, 2013 ರಿಂದ ಡಿಸೆಂಬರ್, 2016 ರವರೆಗೆ NSE ನ MD ಮತ್ತು CEO ಆಗಿದ್ದರು.  ಚಿತ್ರಾ ರಾಮಕೃಷ್ಟ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳ ಮೇರೆಗೆ ಅಧಿಕಾರಿಗಳು ಈ ಶೋಧನೆ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸೆಬಿ ಆದೇಶದ ನಂತರ ಚಿತ್ರಾ ರಾಮಕೃಷ್ಣ ಅವರು ಸುದ್ದಿಯಲ್ಲಿದ್ದು, ಅವರು ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುವ ಯೋಗಿಯೊಬ್ಬರು, ಆನಂದ್ ಸುಬ್ರಮಣಿಯನ್ ಅವರನ್ನು ಎಕ್ಸ್‌ಚೇಂಜ್‌ನ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಸಲಹೆಗಾರರಾಗಿ ನೇಮಕ ಮಾಡಿದ್ದರು. ಆಲ್ಲದೆ ಅನಾಮದೇಯ ಯೋಗಿ ಬಾಬಾಗೆ ಇ-ಮೇಲ್ ಮೂಲಕ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು. 

ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳು, ಡಿವಿಡೆಂಡ್ ಸನ್ನಿವೇಶ ಮತ್ತು ಹಣಕಾಸು ಫಲಿತಾಂಶಗಳು ಸೇರಿದಂತೆ ಕೆಲವು ಆಂತರಿಕ ಗೌಪ್ಯ ಮಾಹಿತಿಯನ್ನು ರಾಮಕೃಷ್ಣ ಅವರು ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ. ಎಕ್ಸ್‌ಚೇಂಜ್‌ನ ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ಬಗ್ಗೆ ಅವರನ್ನು ಸಮಾಲೋಚಿಸಿದ್ದಾರೆ ಎಂದು ಹೇಳಲಾಗಿದೆ. 

ಹಿಂದಿನ ಲೇಖನ” ಪುನೀತ್ ರಾಜ್‍ಕುಮಾರ್ ರಸ್ತೆ ” ನಾಮಕರಣಕ್ಕೆ ಅಧಿಕೃತ ಅನುಮೋದನೆ
ಮುಂದಿನ ಲೇಖನಹಿಜಾಬ್ ಗದ್ದಲ: ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ದಿನ ರಜೆ ಘೋಷಣೆ