ಮೈಸೂರು: ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ದುರಂತದ ಹೊಣೆಗಾರಿಕೆ ನೇರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಮೇಲಿದೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಗಂಭೀರ ಆರೋಪ ಹೊರಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಿಮ್ಮ ಕೈಯಲ್ಲೇ ಈ 11 ಜನರ ರಕ್ತವಿದೆ. ರಾಜೀನಾಮೆ ನೀಡುವುದು ನೈತಿಕ ಜವಾಬ್ದಾರಿ” ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಭಾಸ್ಕರ್ ರಾವ್ ತೀವ್ರ ವಾಗ್ದಾಳಿ ನಡೆಸಿದ ಅವರು, ನಿಮ್ಮ ಕೈಯ್ಯಲ್ಲಿ 11 ಜನರ ಸಾವಿನ ರಕ್ತವಿದೆ. ಇದು ಒಂದು ಚೀಪ್ ರೇಟ್ ಗಿಮಿಕ್. ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ವೇದಿಕೆ ಕಲ್ಪಿಸಿ, ಜನರನ್ನು ನಿರ್ಲಕ್ಷ್ಯ ಮಾಡಿದ ಕಾರ್ಯಕ್ರಮ. ಐಪಿಎಲ್ ಮ್ಯಾಚ್ ಗೆದ್ದಿರುವುದು ಒಂದು ದೊಡ್ಡ ಶಾಪವಾಗಿ ಪರಿಣಮಿಸಿದೆ. ಒಂದು ಕಾರ್ಯಕ್ರಮ ನಡೆಸುವಾಗ ಹಲವು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನೂರು ಆಂಬುಲೆನ್ಸ್, ಸ್ಟ್ರಚರ್, ಹಗ್ಗ. ,ಕ್ರೌಡ್ ಕಟ್ಟಿಂಗ್ ಉಪಕರಣ ಇಟ್ಟುಕೊಳ್ಳಬೇಕು. ಇಂಟೆಲಿಜೆನ್ಸ್ ವಿಫಲವಾದರೂ, ಲಾ ಅಂಡ್ ಆರ್ಡರ್ ತಕ್ಷಣ ಆಕ್ಷನ್ ತೆಗೆದುಕೊಳ್ಳಬೇಕಿತ್ತು. “ಹೀಗೆ ದೊಡ್ಡ ಸಮಾರಂಭ ನಡೆಸುವಾಗ ಸರಿಯಾದ ಮುಂಜಾಗ್ರತಾ ಕ್ರಮ ಅವಶ್ಯ. ಏಳು ಏಜೆನ್ಸಿಗಳು ಸೇರಿ ವೈಫಲ್ಯ ಕಂಡಿವೆ. ಇದರಿಂದಾಗಿ ಈ ದುರಂತ ಸಂಭವಿಸಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಭಾಸ್ಕರ್ ರಾವ್ ಆರ್‌ಸಿಬಿ ತಂಡದ ಗೆಲುವಿನ ಕುರಿತು, “ಅವರು ಬೆಟ್ಟಿಂಗ್ ನಿಂದ ಗೆದ್ದಿದ್ರಾ? ಎಂದು ಗಂಭೀರ ಅನುಮಾನವನ್ನೇ ವ್ಯಕ್ತಪಡಿಸಿದರು. ಆರ್‌ಸಿಬಿ ಕರ್ನಾಟಕ, ಭಾರತದ ತಂಡವಲ್ಲ. ಇದೊಂದು ಖಾಸಗಿ ಕ್ಲಬ್ ಹರಾಜು ಹಾಕಿ ಖರೀದಿಸಿರುವ ತಂಡ. ಇಂತಹ ತಂಡದ ಬಗ್ಗೆ ಸರ್ಕಾರಕ್ಕೇ ಯಾಕಿಷ್ಟು ಪ್ರೀತಿ? ಆರ್‌ಸಿಬಿ ಟೀಂ ಹೈಜಾಕ್ ಮಾಡಿಕೊಳ್ಳಲು ಸರ್ಕಾರ ಯತ್ನ ಮಾಡಿತು.
ಭಾಸ್ಕರ್ ರಾವ್ ಸರ್ಕಾರದ ಮೇಲೂ ಗಂಭೀರ ದೋಷಾರೋಪಿ ಮಾಡುತ್ತಾ, “ಡಿಪಿಆರ್ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದು, ಹೈಕೋರ್ಟ್ ನಿರ್ದೇಶನಗಳನ್ನೇ ಉಲ್ಲಂಘನೆ ಮಾಡಿದಂತಾಗಿದೆ. ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. 11 ಜನರ ಸಾವಿಗೆ ನೀವೇ ನೇರ ಹೊಣೆ. ಆದ್ದರಿಂದ ಸಿಎಂ, ಡಿಸಿಎಂ. ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಭಾಸ್ಕರ್ ರಾವ್ ಆಗ್ರಹಿಸಿದರು.















