ಮುಂಬೈ : 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಬೇಕಾದ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬೇಡದವರನ್ನು ಕೈಬಿಡುವ ಕ್ರಮದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 8 ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್ ಕೊಟ್ಟಿದೆ.
ಹಾಲಿ ಚಾಂಪಿಯನ್ ಆರ್‌ಸಿಬಿ ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿದಂತೆ ನಾಲ್ವರು ವಿದೇಶಿ ಆಟಗಾರರನ್ನು ಕೈಬಿಟ್ಟಿದೆ. ಮುಜರಬಾನಿ, ಲುಂಗಿ ಎನ್‌ಗಿಡಿ ಮತ್ತು ಟಿಮ್ ಸೀಫರ್ಟ್ ಅವರೂ ಪಟ್ಟಿಯಲ್ಲಿದ್ದಾರೆ.
ಮಾಯಾಂಕ್ ಅಗರ್ವಾಲ್ ಮತ್ತು ಸ್ವಸ್ತಿಕ್ ಚಿಕಾರಾ ಅವರನ್ನು ಸಹ ಕೈಬಿಡಲಾಗಿದೆ. ಅವರು 16.4 ಕೋಟಿ ರೂ.ಗಳ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದಾರೆ.















