ಬೆಂಗಳೂರು: ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಅಭಿನಂದನಾ ಕಾರ್ಯಕ್ರಮ ಮತ್ತು ವಿಕ್ಟರಿ ಪರೇಡ್ ಆಯೋಜನೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡದ ಎಲ್ಲಾ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಅಭಿಮಾನಿಗಳಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ. ಆರ್ ಸಿ ಬಿ ಇದುವರೆಗೂ ಐಪಿಎಲ್ ಕಪ್ ಗೆದ್ದಿರಲಿಲ್ಲ ಆದರೆ 18ನೇ ಆವೃತ್ತಿಯಲ್ಲಿ ಕಪ್ ಗೆದ್ದಿದ್ದಾರೆ. ಸಂಜೆ 4 ಗಂಟೆಗೆ ಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಲ್ಲಾ ಆಟಗಾರರಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸುತ್ತಾ, ಇಂದು ಸಂಜೆ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆಯಲಿರುವ ವಿಜಯೋತ್ಸವದ ಪರೇಡ್‌ಗೆ ಸಾವಿರಾರು ಅಭಿಮಾನಿಗಳ ಬೆಂಬಲ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.
ಸಿಎಂ ಸೂಚನೆಗಳು:
- ವಾಹನ ಸವಾರರಿಗೆ ಪರೇಡ್ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು.
- ಪರೇಡ್ ಮಾರ್ಗದಲ್ಲಿ ಟ್ರಾಫಿಕ್ ಸಮರ್ಪಕವಾಗಿ ನಿಭಾಯಿಸುವಂತೆ ಕ್ರಮ ಕೈಗೊಳ್ಳಿ.
- ವಿಕ್ಟರಿ ಪರೇಡ್ ನಡೆಯುವ ರಸ್ತೆಗಳ ಸುತ್ತಲೂ ಪರ್ಯಾಯ ಮಾರ್ಗಗಳನ್ನು ಮುಂಗಡವಾಗಿ ನಿರ್ಧರಿಸಿ, ಸಾರ್ವಜನಿಕರಿಗೆ ತಿಳಿಸಿ.
- ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ, ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
- ಆಟಗಾರರಿಗೂ ಅಭಿಮಾನಿಗಳಿಗೂ ಯಾವುದೇ ಅನಾವಶ್ಯಕ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಬೇಕು.
ಡಿಜಿಪಿ ಅಲೋಕ್ ಸಲೀಂ, ಸಂಚಾರಿ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂಚಿತ ಕಾರ್ಯತಂತ್ರ, ವಾಹನ ಸಂಚಾರ ನಿಯಂತ್ರಣ ಹಾಗೂ ಭದ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು.














