ಮನೆ ಉದ್ಯೋಗ ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 1800 ಹುದ್ದೆಗಳ ನೇಮಕಾತಿ

ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 1800 ಹುದ್ದೆಗಳ ನೇಮಕಾತಿ

0

ಬೆಂಗಳೂರು: ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 1800 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿರುವ ಅಭ್ಯರ್ಥಿಗಳ ಅರ್ಹತೆ ಅನುಸಾರ ಹುದ್ದೆಗಳ ನೇಮಕಾತಿ ನಡೆಯಲಿದೆ.

Join Our Whatsapp Group

ಹುದ್ದೆ ವಿವರ : ಒಟ್ಟು ಹುದ್ದೆ 1800 ಆಗಿದ್ದು, ಯಾವ್ಯಾವ ಹುದ್ದೆ ಎಂಬ ಮಾಹಿತಿ ಇಲ್ಲಿದೆ.

ಅಧಿಸೂಚನೆ (ಇಂಡಿಯನ್​ ಮರ್ಚೆಂಟ್​ ನೇವಿ ಜಾಲತಾಣ)

ಡೆಕ್​ ರೇಟಿಂಗ್​​- 399

ಎಂಜಿನ್​ ರೇಟಿಂಗ್​- 201

ಸೀಮ್ಯಾನ್​ – 196

ಎಲೆಕ್ಟ್ರಿಷಿಯನ್​ – 290

ವೆಲ್ಡರ್​/ ಹೆಲ್ಪರ್​​ – 60

ಮೆಸ್​ ಬಾಯ್​ – 188

ಕುಕ್​ – 466

ವಿದ್ಯಾಭ್ಯಾಸ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಅಥವಾ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 17.5 ಆಗಿದ್ದು, ಗರಿಷ್ಠ 27 ವರ್ಷ ಆಗಿದೆ.

ಅರ್ಜಿ ಸಲ್ಲಿಕೆ : ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಭರಿಸಬೇಕಿದೆ.

ಈ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಮಾರ್ಚ್​ನಲ್ಲಿ ಈ ಹುದ್ದೆಗಳ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 10 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianmerchantnavy.com ಭೇಟಿ ನೀಡಿ.