ಮನೆ ಅಪರಾಧ ತುಮಕೂರು: ತಾಯಿ- ಮಗುವಿನ ಬರ್ಬರ ಹತ್ಯೆ

ತುಮಕೂರು: ತಾಯಿ- ಮಗುವಿನ ಬರ್ಬರ ಹತ್ಯೆ

0

ತುಮಕೂರು(Tumkur): ತಾಯಿ ಮತ್ತು ಮೂರು ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾವ್ಯ ಹಾಗೂ ಜೀವನ್​ ಕೊಲೆಯಾದವರು. ಮನೆಯಲ್ಲೇ ಇಬ್ಬರ ಶವ ಪತ್ತೆಯಾಗಿವೆ. ಕೊಲೆ ಬಳಿಕ ಆಕೆಯ ಗಂಡ ನಾಪತ್ತೆಯಾಗಿದ್ದು,  ಕಾವ್ಯರನ್ನು ಗಂಡನೇ ಕೊಲೆ ಮಾಡಿದ್ದಾನೆ ಎಂಬ ಸಂಶಯ ವ್ಯಕ್ತವಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ನಡೆದಿರಬಹುದು ಎಂಬ ಮಾಹಿತಿ ಪೊಲೀಸರ​ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಸ್ಥಳಕ್ಕೆ ಸಿಪಿಐ ನದಾಫ್ ಹಾಗೂ ಚೇಳೂರು ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬೆಂಗಳೂರು ಗ್ರಾಮ ಪಂಚಾಯತ್’ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮಾಜಿ ಸಚಿವೆ ರಾಣಿ ಸತೀಶ್- ಮಹಡಿ ಶಿವಮೂರ್ತಿ ಫೋನ್ ಸಂಭಾಷಣೆ ವೈರಲ್