ಮನೆ ಉದ್ಯೋಗ CRPF ನಲ್ಲಿ 1,29,929 ಕಾನ್ಸ್ಟೇಬಲ್ ಹುದ್ದೆಗಳ ನೇಮಕ

CRPF ನಲ್ಲಿ 1,29,929 ಕಾನ್ಸ್ಟೇಬಲ್ ಹುದ್ದೆಗಳ ನೇಮಕ

0

ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಕಾನ್ಸ್ ಟೇಬಲ್ (ಜೆನೆರಲ್ ಡ್ಯೂಟಿ) ಖಾಲಿ ಹುದ್ದೆಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ ಈ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯ ಕರಡು ನಿಯಮಾವಳಿಗಳನ್ನು ಪ್ರಕಟ ಮಾಡಿದೆ. ಸದರಿ ಹುದ್ದೆಗಳನ್ನು ಕೇಂದ್ರ ಸರ್ಕಾರ ಅಧೀನದ ನೇಮಕಾತಿ ಪ್ರಾಧಿಕಾರವಾದ ಸಿಬ್ಬಂದಿ ನೇಮಕಾತಿ ಆಯೋಗವು ಪರೀಕ್ಷೆ ನಡೆಸಿ ಭರ್ತಿ ಮಾಡಲಿದೆ. ಶೀಘ್ರದಲ್ಲೇ ಈ ಹುದ್ದೆಗಳಿಗೆ ಅಧಿಸೂಚಿಸಿ, ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.
ಎಸ್’ಎಸ್’ಸಿ ಮೂಲಕ ಸಿಆರ್’ಪಿಎಫ್’ನಲ್ಲಿ ಭರ್ತಿ ಮಾಡಲಿರುವ ಕಾನ್ಸ್’ಟೇಬಲ್ (ಜೆನೆರಲ್ ಡ್ಯೂಟಿ) ಹುದ್ದೆಗಳ ವಿವರ, ಅರ್ಹತೆ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

Join Our Whatsapp Group


ಹುದ್ದೆ ಹೆಸರು : ಕಾನ್ಸ್ ಟೇಬಲ್ (ಜೆನೆರಲ್ ಡ್ಯೂಟಿ)
ಒಟ್ಟು ಹುದ್ದೆಗಳ ಸಂಖ್ಯೆ : 1,29,929 (1,25,262 ಪುರುಷ ಮೀಸಲಾತಿ ಹುದ್ದೆಗಳು, 4667 ಮಹಿಳಾ ಮೀಸಲಾತಿ ಹುದ್ದೆಗಳು.)
ಹುದ್ದೆಯ ಶ್ರೇಣಿ : ಜೆನೆರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ಸಿ (ನಾನ್ ಗೆಜೆಟೆಡ್, ನಾನ್ ಮಿನಿಸ್ಟ್ರೇರಿಯಲ್) ಹುದ್ದೆ.
ಕಾನ್ಸ್ ಟೇಬಲ್ ಹುದ್ದೆಗೆ ವೇತನ ಶ್ರೇಣಿ : ಲೆವೆಲ್ 3 ಪೇ ಮೆಟ್ರಿಕ್ಸ್, Rs.21,700-69,100.

ವಿದ್ಯಾರ್ಹತೆ : ಕಾನ್ಸ್ ಟೇಬಲ್ (ಜೆನೆರಲ್ ಡ್ಯೂಟಿ) ಹುದ್ದೆಗಳಿಗೆ ಮೆಟ್ರಿಕ್ಯೂಲೇಷನ್ (ಎಸ್ ಎಸ್ ಎಲ್ ಸಿ / 10ನೇ ತರಗತಿ) ಪಾಸ್ ಮಾಡಿರಬೇಕು.
ಆಯ್ಕೆವಿಧಾನ : ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಮಾಜಿ ಅಗ್ನಿವೀರ್ ಅಭ್ಯರ್ಥಿಗಳಿಗೆ ಇಟಿ, ಪಿಎಸ್ಟಿ ಪರೀಕ್ಷೆ ವಿನಾಯಿತಿ ಇರುತ್ತದೆ.
ವಯಸ್ಸಿನ ಅರ್ಹತೆಗಳು

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ 23 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ ವಯಸ್ಸು ಮೀರಿರಬಾರದು.
    ಕಾನ್ಸ್ ಟೇಬಲ್ ಹುದ್ದೆಗಳಿಗೆ ಪ್ರೊಬೇಷನ್ ಅವಧಿ : 2 ವರ್ಷ ಇರುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಕರೆಯುವ / ಅಧಿಸೂಚನೆ ಹೊರಡಿಸುವ ದಿನಾಂಕದ ಬಗ್ಗೆ ಯಾವುದೇ ಸುಳಿವು ನೀಡಲಾಗಿಲ್ಲ. ಆದರೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಪ್ರಾಧಿಕಾರವಾಗಿದ್ದು, ಅಭ್ಯರ್ಥಿಗಳು ನೋಟಿಫಿಕೇಶನ್ ಅನ್ನು ಚೆಕ್ ಮಾಡಲು ಆಗಾಗ https://ssc.nic.in/ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಿ.