ಕೇಂದ್ರ ಸಿಲ್ಕ್ ಬೋರ್ಡ್ (ಸಿಎಸ್’ಬಿ) ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ವಿವಿಧ 142 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಿಸ್ಟಂಟ್ ಡೈರೆಕ್ಟರ್, ಅಪ್ಪರ್ ಡಿವಿಷನ್ ಕ್ಲರ್ಕ್, ಅಸಿಸ್ಟಂಟ್ ಸೂಪರಿಂಟೆಂಡಂಟ್ ಮತ್ತು ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಗ್ರೂಪ್ ಎ ಹುದ್ದೆಗಳು
ಅಸಿಸ್ಟಂಟ್ ಡೈರೆಕ್ಟರ್ (A&A) : 04
ಗ್ರೂಪ್ ಬಿ ಹುದ್ದೆಗಳು
ಕಂಪ್ಯೂಟರ್ ಪ್ರೋಗ್ರಾಮರ್ : 01
ಅಸಿಸ್ಟಂಟ್ ಸೂಪರಿಂಟೆಂಡಂಟ್ (ಅಡ್ಮಿನ್ ) : 25
ಅಸಿಸ್ಟಂಟ್ ಸೂಪರಿಂಟೆಂಡಂಟ್ (ಟೆಕ್) : 05
ಸ್ಟೆನೋಗ್ರಾಫರ್ (ಗ್ರೇಡ್-I) : 04
ಲೈಬ್ರರಿ ಅಂಡ್ ಇನ್ಫಾರ್ಮೇಷನ್ ಅಸಿಸ್ಟಂಟ್ : 02
ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್ ) : 05
ಜೂನಿಯರ್ ಟ್ರಾನ್ಸ್’ಲೇಟರ್ (ಹಿಂದಿ) : 04
ಗ್ರೂಪ್ ಸಿ ಹುದ್ದೆಗಳು
ಅಪ್ಪರ್ ಡಿವಿಷನ್ ಕ್ಲರ್ಕ್ (ಯುಡಿಸಿ) : 85
ಸ್ಟೆನೋಗ್ರಾಫರ್ ಗ್ರೇಡ್-2: 04
ಫೀಲ್ಡ್ ಅಸಿಸ್ಟಂಟ್ : 01
ಕುಕ್ : 02
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಸಿಎ / ಸ್ನಾತಕೋತ್ತರ ಪದವಿ / ಪದವಿ / ಬಿಇ / ಡಿಪ್ಲೊಮ / ಮೆಟ್ರಿಕ್ಯೂಲೇಷನ್ ಜತೆಗೆ ಡಿಪ್ಲೊಮ ವಿದ್ಯಾರ್ಹತೆ ಅನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು. ಕಂಪ್ಲೀಟ್ ಶೈಕ್ಷಣಿಕ ಅರ್ಹತೆಯನ್ನು ಹುದ್ದೆವಾರು ತಿಳಿಯಲು ಮಂಡಳಿಯ ಅಧಿಕೃತ ನೋಟಿಫಿಕೇಶನ್ ಓದಬೇಕು.
ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 24-12-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-01-2023
ಅರ್ಜಿ ಶುಲ್ಕ ವಿವರ
ಮೀಸಲಾತಿಯೇತರ / ಒಬಿಸಿ / EWS/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗ್ರೂಪ್ ಎ ಹುದ್ದೆಗಳಿಗೆ ರೂ.1000.
ಮೀಸಲಾತಿಯೇತರ / ಒಬಿಸಿ / EWS/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗ್ರೂಪ್ ಬಿ, ಸಿ ಹುದ್ದೆಗಳಿಗೆ ರೂ.750.
ಎಸ್ಸಿ / ಎಸ್ಟಿ / ಅಂಕವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಪ್ಲಿಕೇಶನ್ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.
ಕೇಂದ್ರ ಸಿಲ್ಕ್ ಬೋರ್ಡ್ ಅಧಿಕೃತ ವೆಬ್ಸೈಟ್ ವಿಳಾಸ : https://csb.gov.in/
ಆಯ್ಕೆ ವಿಧಾನ / ವೇತನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಿ, ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳಿಗೆ ಅನುಗುಣವಾಗಿ ರೂ.30,000 – 50,000 ವರೆಗೆ ವೇತನ ಶ್ರೇಣಿ ನೀಡಲಾಗುತ್ತದೆ.