ಮನೆ ಮನರಂಜನೆ ಚಿತ್ರ ನಿರ್ದೇಶಕ ರವಿ ಟಂಡನ್ ನಿಧನ

ಚಿತ್ರ ನಿರ್ದೇಶಕ ರವಿ ಟಂಡನ್ ನಿಧನ

0

ಬೆಂಗಳೂರು:ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಂದೆ,  ಹಿಂದಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಟಂಡನ್ ನಿಧನರಾಗಿದ್ದಾರೆ.

ರವಿ ಟಂಡನ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಪುತ್ರಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಪುತ್ರ ರಾಜೀವ್ ಟಂಡನ್ ಅವರನ್ನು ರವಿ ಟಂಡನ್ ಅಗಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಸೋಂಕಿಗೆ ರವಿ ಅವರು ಒಳಗಾಗಿದ್ದರು. ಶುಕ್ರವಾರ ನಸುಕಿನ ಜಾವ 3.30ಕ್ಕೆ ಉಸಿರಾಟದ ವೈಫಲ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ರವೀನಾ ಅವರು ತಮ್ಮ ತಂದೆಯ ಸಾವಿನ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.‘ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ. ನಾನು ಯಾವಾಗಲೂ ನಿಮ್ಮಲ್ಲಿರುತ್ತೇನೆ. ನೀವು ನನ್ನನ್ನು ತೊರೆದುಹೋಗಲು ಎಂದಿಗೂ ಬಿಡುವುದಿಲ್ಲ. ಲವ್ ಯು ಪಪ್ಪಾ’ ಎಂದು ತಿಳಿಸಿದ್ದಾರೆ.

ತಂದೆಯ ಜೊತೆಗಿನ ಫೋಟೊಗಳನ್ನೂ ರವೀನಾ ಹಂಚಿಕೊಂಡಿದ್ದಾರೆ.

ರವಿ ಟಂಡನ್ ಅವರು ಬಾಲಿವುಡ್ ನಲ್ಲಿ ಹಲವಾರು ಹಿಂದಿ ಚಿತ್ರಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು.

ಹಿಂದಿನ ಲೇಖನಕೊರೊನಾದಿಂದ ಆರ್ಥಿಕ ಸಂಕಷ್ಟ: ಮೈಸೂರು ವಿವಿಯಿಂದ ಯುಜಿಸಿ ಅನುದಾನ ಕೋರಿಕೆ
ಮುಂದಿನ ಲೇಖನಮುಸ್ಲಿಂ ಮುಖಂಡನಿಂದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಹಿರಂಗ ಕ್ಷಮೆ ಯಾಚಿಸುವಂತೆ ತನ್ವೀರ್ ಸೇಠ್ ಬಹಿರಂಗ ಪತ್ರ