ಮನೆ ಆರೋಗ್ಯ ಕೆಂಪಕ್ಕಿ ಹಾಗೂ ಕಪ್ಪಕ್ಕಿಯ ಅನ್ನ ಮಧುಮೇಹ ಇದ್ದವರಿಗೆ ಬಹಳ ಒಳ್ಳೆಯದು…

ಕೆಂಪಕ್ಕಿ ಹಾಗೂ ಕಪ್ಪಕ್ಕಿಯ ಅನ್ನ ಮಧುಮೇಹ ಇದ್ದವರಿಗೆ ಬಹಳ ಒಳ್ಳೆಯದು…

0

ನಾವು ಹಲವಾರು ಬಾರಿ ಮಧುಮೇಹಕ್ಕೆ ಸಂಬಂಧ ಪಟ್ಟ ಲೇಖನದಲ್ಲಿ ಹೇಳಿದ್ದೇವೆ…ಅದೇನೆಂದರೆ, ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು, ಆದಷ್ಟು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಬಹುಮುಖ್ಯವಾಗಿ ಯಾವ ಆಹಾರಗಳನ್ನು ತಿನ್ನಬೇಕು ಹಾಗೂ ಯಾವ ಆಹಾರಗಳನ್ನು ತಿನ್ನಬಾರದು ಎನ್ನುವುದನ್ನು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಬೇಕು, ಹಾಗೂ ಅವರ ಸಲಹೆಗಳಂತೆ ಮುಂದುವರೆಯಬೇಕು.

ಇಲ್ಲಿ ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಹೆಚ್ಚಿನವರು ಸಕ್ಕರೆ ಕಾಯಿಲೆ ಇರುವವರು ಅನ್ನ ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ!

ಅಲ್ಲದೆ ಸಕ್ಕರೆ ಕಾಯಿಲೆ ಮತ್ತಷ್ಟು ನಿಯಂತ್ರಣ ತಪ್ಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ನಿಮಗೆ ಗೊತ್ತಿರಲಿ ಕೆಂಪಕ್ಕಿ ಹಾಗೂ ಕಪ್ಪು ಅಕ್ಕಿಯ ಅನ್ನ ಮಧುಮೇಹ ಇರುವವರಿಗೆ ಬಹಳ ಒಳ್ಳೆಯದು ಎಂದು ಈಗಾಗಲೇ ಸಾಬೀತಾಗಿದೆ…

ಕೆಂಪಕ್ಕಿ ಅನ್ನ (ಕುಚಲಕ್ಕಿ)

•       ಆರೋಗ್ಯ ತಜ್ಞರ ಪ್ರಕಾರ ಕೆಂಪಕ್ಕಿಯ ಅನ್ನದಲ್ಲಿ, ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಅಂಶಗಳು ಕಂಡು ಬರುವುದರಿಂದ, ಮಧುಮೇಹ ರೋಗಿಗಳ ಆರೋಗ್ಯಕ್ಕೆ, ಇದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

•       ಪ್ರಮುಖವಾಗಿ ನಿಧಾನವಾಗಿ ಜೀರ್ಣವಾಗುವ ಪ್ರಕ್ರಿಯೆಯನ್ನು ಹೊಂದಿರುವ ಈ ಅಕ್ಕಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ, ನೋಡಿಕೊಳ್ಳುವುದು ಮಾತ್ರವಲ್ಲದೆ ಮಧುಮೇಹ ಕಾಯಿಲೆಯನ್ನು ನಿಯಂತ್ರ ಣದಲ್ಲಿಡುತ್ತದೆ.

ಬಿಳಿ ಅನ್ನಕ್ಕೆ ಹೋಲಿಸಿದರೆ

•       ಇನ್ನೊಂದು ವಿಷ್ಯ ಇಲ್ಲಿ, ನಿಮಗೆ ಗೊತ್ತಿರಬೇಕು ಅದೇ ನೆಂದರೆ, ಬಿಳಿ ಅನ್ನಕ್ಕೆ ಹೋಲಿಸಿದರೆ ಕೆಂಪಕ್ಕಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.

•       ಅಲ್ಲದೆ ಈ ಅಕ್ಕಿಯ ಅನ್ನ ನಿಧಾನವಾಗಿ ಜೀರ್ಣ ವಾಗುವ ಕಾರಣದಿಂದ, ರಕ್ತದಲ್ಲಿ ಸಕ್ಕರೆಪ್ರಮಾಣ ನಿಯಂತ್ರಣಕ್ಕೆ ಬಂದು, ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿರುತ್ತದೆ.

ಕಪ್ಪು ಅಕ್ಕಿ

•       ಇನ್ನು ಈ ಕಪ್ಪಕ್ಕಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ವಿಟಮಿನ್ ಅಂಶಗಳು, ಪ್ರೋಟೀನ್ ಹಾಗೂ ಖನಿಜಾಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದರ ಜೊತೆಗೆ ಮಧುಮೇಹ ಸಮಸ್ಯೆ ಕೈಮೀರಿ ಹೋಗದಂತೆ ನೋಡಿಕೊಳ್ಳುತ್ತದೆ

•       ಪ್ರಮಾಣದಲ್ಲಿ ಮೆಗ್ನೀಷಿಯಂ ಹಾಗೂ ನಾರಿನಾಂಶದ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್ ಪ್ರಮಾಣ

ಕಪ್ಪು ಅಕ್ಕಿಯಿಂದ ತಯಾರು ಮಾಡುವ ಅನ್ನದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಯಥೇಚ್ಛವಾಗಿ ಕಂಡು ಬರುತ್ತದೆ. ಇದು ದೇಹದಲ್ಲಿ ಊರಿಯೂತಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋ ರಾಡಲು ನೆರವಿಗೆ ಬರುತ್ತದೆ. ಅಷ್ಟೇ ಅಲದಲದೆ ಸಕ್ಕರೆ ಕಾಯಿಲೆ ಇರುವವರಿಗೆ ದೇಹದಲ್ಲಿ ಜೀವಕೋಶ ಗಳ ಹಾನಿ ಉಂಟಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

ಕೊನೆಯ ಮಾತು

ಮಧುಮೇಹ ಇದ್ದವರು ಅನ್ನ ಊಟ ಮಾಡಿಕೊಂಡ ಮೇಲೆ, ತಿಂಗಳಲ್ಲಿ ಒಂದೆರಡು ಬಾರಿಯಾದರೂ ಶುಗರ್ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಯಾಕೆಂದರೆ ಹೀಗೆ ಮಾಡುವುದರಿಂದ, ಸದ್ಯದ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವ ಪ್ರಮಾಣದಲ್ಲಿ ಇದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ.