ಮನೆ ಮನರಂಜನೆ ಮದುವೆ ಸದ್ಯಕ್ಕಿಲ್ಲ ಎಂದ ನಟಿ ಆಲಿಯಾ ಭಟ್

ಮದುವೆ ಸದ್ಯಕ್ಕಿಲ್ಲ ಎಂದ ನಟಿ ಆಲಿಯಾ ಭಟ್

0

ಮುಂಬೈ: ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಮದುವೆ ಕುರಿತಾದ ಗಾಳಿ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೆ ಈ ವಿಚಾರವಾಗಿ ಮೌನ ಮುರಿದಿರುವ ಆಲಿಯಾ ಭಟ್‌ ಸದ್ಯ ಮದುವೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ಆಲಿಯಾ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮದುವೆ ಸದ್ಯಕಿಲ್ಲ ಎಂದು ಹೇಳಿದ್ದಾರೆ.

 ರಣಬೀರ್‌, ಆಲಿಯಾ ಲವ್‌ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಣಬೀರ್‌ ಹಾಗೂ ಆಲಿಯಾ ಕುಟುಂಬದವರು ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಗಾಸಿಪ್‌ಗಳು ಹರಡಿದ್ದವು.

‘ಬಾಲಿವುಡ್​ ಬಬಲ್​’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ತುಂಬಾ ಜನ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಮ್ಮ ಬಗ್ಗೆಯೂ ಗಾಳಿ ಸುದ್ದಿ ಹರಡಿರಬಹುದು. ಸದ್ಯಕ್ಕೆ ಮದುವೆ ಇಲ್ಲ, ನಮಗೆ ಕಂಪರ್ಟ್‌ ಎನಿಸುವಂತಹ ಸಮಯ ಬಂದಾಗ ಮದುವೆ ಆಗುತ್ತೇವೆ ಎಂದಿದ್ದಾರೆ.

ನಾನು ಕಂಡು ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ ಎಂದು ಆಲಿಯಾ ಹೇಳಿದ್ದಾರೆ.

ಹಿಂದಿನ ಲೇಖನತುಲಾ ರಾಶಿಯವರ ಗುಣಸ್ವಭಾವ
ಮುಂದಿನ ಲೇಖನಪ್ರತ್ಯೇಕ ಪ್ರಕರಣ: ಬಿಬಿಎಂಪಿ, ಬೆಸ್ಕಾಂ ನ 6 ಮಂದಿ ಬಂಧನ