ಮನೆ ಮನರಂಜನೆ ಯೂಟ್ಯೂಬ್‌  ನಲ್ಲಿ ‘ಹೊಂದಿಸಿ ಬರೆಯಿರಿ’ ಚಿತ್ರ ಬಿಡುಗಡೆ

ಯೂಟ್ಯೂಬ್‌  ನಲ್ಲಿ ‘ಹೊಂದಿಸಿ ಬರೆಯಿರಿ’ ಚಿತ್ರ ಬಿಡುಗಡೆ

0

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಹಾಗೂ ಸಂಡೇ ಸಿನಿಮಾಸ್‌ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ ಹೊಂದಿಸಿ ಬರೆಯಿರಿ ಯೂಟ್ಯೂಬ್‌ ನಲ್ಲಿ ಬಿಡುಗಡೆಯಾಗಿದೆ.

Join Our Whatsapp Group

ಅಮೆಜಾನ್‌ ಪ್ರೈಮ್‌ ನಲ್ಲಿ ಸದ್ಯ ಪ್ರಸಾರ ಆಗುತ್ತಿದ್ದರೂ, ಇದು ಭಾರತ, ಯುಎಸ್‌ ಎ ಮತ್ತು ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮ್‌ ಆಗುತ್ತಿಲ್ಲ. ಹಾಗಾಗಿ ಉಳಿದ ಎಲ್ಲ ದೇಶಗಳ ಕನ್ನಡಿಗರಿಗೆ ತಲುಪಬೇಕು.ಥಿಯೇಟರ್‌ನಲ್ಲಿ ಚಿತ್ರ ನೋಡಿರದ ಹಾಗೂ ಒಟಿಟಿ ಚಂದಾದಾರರ ಆಗದ ಎಲ್ಲರಿಗೂ ಚಿತ್ರ ತಲುಪಲಿ ಎನ್ನುವ ಉದ್ದೇಶ ಚಿತ್ರತಂಡ ಈ ನಿರ್ಧಾರ ಮಾಡಿದೆ.

ಹೊಂದಿಸಿ ಬರೆಯಿರಿ ಸಿನಿಮಾಗೆ ಹಾಕಿದ್ದ ಹಣ ವಾಪಸ್‌ ಆಗದಿದ್ದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಹಾಗಂತ ಯೂಟ್ಯೂಬ್‌ ನಲ್ಲಿ ರೆಂಟಲ್‌ ಮೊಡೆಲ್‌ ಆಯ್ಕೆ ಮಾಡಿ ಒಂದಿಷ್ಟು ಹಣ ನಿಗದಿ ಪಡಿಸಿ ನೋಡಿ ಎಂದು ಕೇಳುವುದಕ್ಕಿಂತ, ಉಚಿತವಾಗಿ ಯೂಟ್ಯೂಬ್‌ನಲ್ಲಿ ಎಲ್ಲರೂ ಸಿನಿಮಾ ನೋಡಲಿ, ಅವರಿಗೆ ಸಿನಿಮಾ ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರ ಮಾಡಿದೆ ಚಿತ್ರತಂಡ.

“ನಮ್ಮ ಹೊಂದಿಸಿ ಬರೆಯಿರಿ ಚಿತ್ರದ ಲಿಂಕ್‌ ಅನ್ನು ಎಲ್ಲರಿಗೂ ತಲುಪಿಸಿ. ನಮ್ಮ ಸಂಸ್ಥೆಯ ಮುಂದಿನ ಸಿನಿಮಾಗಳಿಗೆ ಪೋ›ತ್ಸಾಹಿಸಿ, ಈಗಾಗಲೇ ಪ್ರೀ ಪೊ›ಡಕ್ಷನ್‌ ಹಂತದಲ್ಲಿರುವ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ’ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ್‌.

ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಪ್ರವೀಣ್‌ ತೇಜ್‌, ನವೀನ್‌ ಶಂಕರ್‌, ಶ್ರೀ ಮಹದೇವ್‌, ಅನಿರುದ್ಧ್ ಆಚಾರ್ಯ, ಭಾವನಾ ರಾವ್‌, ಐಶಾನಿ ಶೆಟ್ಟಿ, ಸಂಯುಕ, ಅರ್ಚನಾ ಜೋಯಿಸ್‌ ಹಲವರು ನಟಿಸಿದ್ದಾರೆ.

ಹಿಂದಿನ ಲೇಖನಪ್ರಜ್ವಲ್ ಪ್ರಕರಣದಿಂದ ದೇವೇಗೌಡರ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಆರ್‌ ಎಸ್‌ ಎಸ್‌ ನಾಯಕರ ಭಾವಚಿತ್ರದೊಂದಿಗೆ ಸಿಕ್ಕಿಬಿದ್ದಿದ್ದ 8 ಪಿಎಫ್ಐ ಸದಸ್ಯರ ಜಾಮೀನು ರದ್ದುಗೊಳಿಸಿದ ಸುಪ್ರೀಂ