ಪರಂಗಿ ವಿದೇಶಿ ಮೂಲದ್ದಾದರೂ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿದೆ. ಪರದೇಶದಿಂದ ಬಂದಿದ್ದರಿಂದ ಅದನ್ನು ಪರಂಗಿಹಣ್ಣು ಎಂದೂ ಕರೆಯಲಾಗುತ್ತದೆ. ಪಪ್ಪಾಯಿ ಗರ್ಭವತಿಯರಿಗೆ ನಿಷೇಧ ಎನ್ನುವುದೂ ಇದೆ. ಪಪ್ಪಾಯಿಯ ತಿಂದರೆ ಉಷ್ಣ ಎನ್ನುವುದು ಸಾಮಾನ್ಯ. ಆದರೆ ಉಷ್ಣಕಾರಕವಾಗಿದ್ದರೂ ಮಲವಿಸರ್ಜನೆ ಸರಾಗಗೊಳಿಸುವ ಅತ್ಯುತ್ತಮ ಹಣ್ಣು ಇದು.
ಪಪ್ಪಾಯಿಯಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.
ಹೃದ್ರೋಗ
ಹೃದ್ರೋಗ ಮತ್ತು ಸಂಧಿವಾತಗಳ ನಿವಾರಣೆಗೂ ಪಪ್ಪಾಯಿ ಸೇವನೆ ಉಪಯುಕ್ತ. ವಿಶೇಷವೆಂದರೆ ಪಪ್ಪಾಯಿ ವರ್ಷದ ಎಲ್ಲ ಋತುಗಳಲ್ಲಿಯೂ ದೊರೆಯುವ ವಿಶೇಷ ಫಲ.
ನರದೌರ್ಬಲ್ಯ
ನರಗಳ ದೌರ್ಬಲ್ಯ ನಿವಾರಿಸಲು ಪಪ್ಪಾಯಿ ಬಹಳ ಉಪಯುಕ್ತ, ಪಪ್ಪಾಯಿಯೊಂದಿಗೆ ಹಾಲು ಮತ್ತು ಜೇನು ಸೇರಿಸಿ ಸೇವಿಸಿದರೆ ನರದೌರ್ಬಲ್ಯ ಮಾಯವಾಗುತ್ತದೆ.
ಕಿಡ್ನಿ ಸ್ಟೋನ್
ಮೂತ್ರನಾಳದಲ್ಲಿ ಕಲ್ಲು ನಿವಾರಣೆಗೂ ಪಪ್ಪಾಯಿಯ ನೆರವಾಗುತ್ತದೆ. ಪಪ್ಪಾಯಿಯನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಮೂತ್ರನಾಳದ ಕಲ್ಲು ಕರಗುತ್ತದೆ.
ಮುಟ್ಟಿನ ಸಮಸ್ಯೆ
ಮುಟ್ಟು ನಿಯಮಿತವಾಗಿ ಆಗದಿದ್ದರೆ ಪಪ್ಪಾಯಿ ಬೀಜ ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ಮುಟ್ಟು ಉತ್ತಮಗೊಳ್ಳುತ್ತದೆ.
ಲಿವರ್ ಸಮಸ್ಯೆ
ಯಕೃತ್ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಯಕೃತ್ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
ರಾತ್ರಿ ಕುರುಡು
ಪಪ್ಪಾಯಿ ಹಣ್ಣನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ನರದೌರ್ಬಲ್ಯ ನಿವಾರಣೆಯಾಗುತ್ತದೆ. ರಾತ್ರಿ ಕುರುಡಿನಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಉಪಯುಕ್ತವಾಗಬಲ್ಲುದು.
ಜಂತುಹುಳು
ಪಪ್ಪಾಯಿ ಕಾಯಿಯನ್ನು ಸಣ್ಣಗೆ ಹೋಳು ಮಾಡಿ ಅದಕ್ಕೆ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಮತ್ತು ನಿಂಬೆರಸ ಸೇರಿಸಿ ತಿನ್ನುವುದರಿಂದ ಜಂತುಹುಳುವಿನ ಬಾಧೆ ನಿವಾರಣೆಯಾಗುತ್ತದೆ.
ಗಾಯ
ಪಪ್ಪಾಯಿ ಕಾಯಿಯ ಸಿಪ್ಪೆಯನ್ನು ಒಸರುವ ರಸವನ್ನು ಗಾಯದ ಮೇಲೆ ಹಾಕಿ ಅದರ ಮೇಲೆ ದಪ್ಪ ಸಿಪ್ಪೆಯನ್ನು ಹೆರೆದು ಅದಕ್ಕೆ ಕಟ್ಟಿದರೆ ಗಾಯ ಶೀಘ್ರವಾಗಿ ಗುಣವಾಗುತ್ತದೆ.
ಮೂಲವ್ಯಾಧಿ
ಪಪ್ಪಾಯಿ ಹಣ್ಣು ಮೂಲವ್ಯಾಧಿಗೆ ರಾಮಬಾಣ,
ಚರ್ಮದ ಕಲೆ
ಫರಂಗಿ ಹಣ್ಣಿನಿಂದ ಚರ್ಮವನ್ನು ತಿಕ್ಕುತ್ತಿದ್ದರೆ ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ.
ಹೊಟ್ಟೆಹುಳು
ಪರಂಗಿ ಎಲೆಯನ್ನು ತೊಳೆದು ತಿಂದರೆ ಕರುಳಿನ ಕ್ರಿಮಿಗಳು ನಾಶವಾಗುತ್ತವೆ.