ಕುಮ್ಮಿಂಗ್: ಪೂರ್ವ ಚೀನಾದಲ್ಲಿ ಸೋಮವಾರ ಅಪರಾಹ್ನ 132 ಮಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ ದಟ್ಟ ಕಾಡಿನ ಮಧ್ಯೆ ಪತನಕ್ಕೀಡಾದ ಘಟನೆಯಲ್ಲಿ ಎಲ್ಲರೂ ದುರ್ಮರಣಕ್ಕೀಡಾಗಿದ್ದಾರೆ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ, ಆದರೆ ಇಲ್ಲಿಯವರೆಗೆ, ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿದ್ದವರು ಯಾರೂ ಪತ್ತೆಯಾಗಿಲ್ಲ” ಎಂದು ರಾಜ್ಯ ಬ್ರಾಡ್‌ಕಾಸ್ಟರ್ ಸಿಸಿಟಿವಿ ಇಂದು ಬೆಳಿಗ್ಗೆ ತಿಳಿಸಿದೆ.
ಅಪಘಾತ ನಡೆದು ಈಗಾಗಲೇ 18 ಗಂಟೆಯಾಗಿದೆ. ಬೋಯಿಂಗ್ 737-800 ವಿಮಾನ ಯುನ್ನಾನ್‌ನ ನೈಋತ್ಯ ಪ್ರಾಂತ್ಯದ ಕುನ್ಮಿಂಗ್‌ನಿಂದ ಪೂರ್ವ ಕರಾವಳಿಯ ಗುವಾಂಗ್‌ಝೌ ಕೈಗಾರಿಕಾ ಕೇಂದ್ರದ ಕಡೆಗೆ ಹಾರುತ್ತಿದ್ದಾಗ ಗುವಾಂಗ್‌ಕ್ಸಿ ಪ್ರದೇಶದ ವುಝೌ ನಗರದ ಬಳಿ ಅಪಘಾತಕ್ಕೀಡಾಯಿತು. ಅಪಘಾತಕ್ಕೀಡಾಗುತ್ತಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಸಾ ಸ್ಯಾಟಲೈಟ್ ನಲ್ಲಿ ಕಾಣಿಸುತ್ತಿದೆ.
ಪೂರ್ವ ಚೀನಾದ ವಿಮಾನ 5735 ಸುಮಾರು 29,000 ಅಡಿಗಳಷ್ಟು ಎತ್ತರದಲ್ಲಿ ಪ್ರಯಾಣಿಸುತ್ತಿದ್ದಾಗ ನಿನ್ನೆ ಅಪರಾಹ್ನ ಸುಮಾರು 2.20ಕ್ಕೆ ಕಿರಿದಾದ ಕಡಿದಾದ ಪ್ರದೇಶವನ್ನು ಪ್ರವೇಶಿಸಿತು ಎಂದು ಸ್ಥಳೀಯ ದಾಖಲೆಗಳ ಪ್ರಕಾರ ವೆಬ್ ಸೈಟ್ ಫ್ಲೈಟ್ ರಾಡಾರ್ 24.ಕಾಮ್ ತಿಳಿಸುತ್ತದೆ.
ವಿಮಾನವು 7,400 ಅಡಿಗಳಿಗೆ ಬಿದ್ದಿದೆ. ಪ್ರಪಾತಕ್ಕೆ ಬೀಳಲು ಆರಂಭಿಸಿ 96 ಸೆಕೆಂಡ್ ಗಳಲ್ಲಿ ದಾಖಲೆಗಳನ್ನು ರವಾನಿಸುವುದನ್ನು ನಿಲ್ಲಿಸಿದೆ. ವಿಮಾನದಲ್ಲಿ 123 ಪ್ರಯಾಣಿಕರು, 9 ಮಂದಿ ಸಿಬ್ಬಂದಿ ಇದ್ದರು ಎಂದು ನಾಗರಿಕ ವಿಮಾನಯಾನ ಆಡಳಿತ ತಿಳಿಸಿದೆ.