• ನಿಂಬೆ ರಸದಲ್ಲಿ ವೀಳ್ಯದೆಲೆ ನುಣ್ಣಗೆ ಅರೆದು ಗಾಯಕ್ಕೆ ಮೆತ್ತಿ ಕಟ್ಟು ಕಟ್ಟಿ.
• ಬಾಳೆಕಾಯಿ ಕತ್ತರಿಸಿದಾಗ ರಸ ತೊಟ್ಟಿಕ್ಕುವುದು ಈ ರಸವನ್ನು ಗಾಯದ ಮೇಲೆ ತೊಟ್ಟಿಕ್ಕಿಸಿ.
ಗಾಯಕ್ಕೆ ಮದ್ದು :
• ವೀಳ್ಯದೆಲೆಯನ್ನು ಹಿಂಡಿ ರಸ ತೆಗೆಯಿರಿ, ಈ ರಸವನ್ನು ಗಾಯಕ್ಕೆ ಲೇಪಿಸಿ ನಂತರ ಗಾಯದ ಮೇಲೆ ಒಂದು ವೀಳ್ಯದೆಲೆ ಇಟ್ಟು ಬ್ಯಾಂಡೇಜ್ ಮಾಡಿ ಎರಡು ಅಥವಾ ಮೂರು ದಿನಗಳಲ್ಲಿ ಗಾಯ ಮಾಯವುದು.
• ಬೇವಿನ ಮರದ ತೊಗಟೆಯನ್ನು ಕಲ್ಲಿನ ಮೇಲೆ ತೇದು ಗಂಧ ತೆಗೆಯಿರಿ. ಗಾಯವನ್ನು ಬೇವಿನ ಸೊಪ್ಪಿನ ಕಷಾಯದಿಂದ ತೊಳೆದು, ಈ ಗಂಧ ಲೇಪಿಸಿ ಚಿಕಿತ್ಸೆ ಯಾವುದೇ ಎರಡರಿಂದ ಮೂರು ದಿನಗಳು.
• ಅರಿಶಿಣದ ಪುಡಿ, ಬೇವಿನ ಸೊಪ್ಪು, ಕರಿ ಎಳ್ಳು , ಅಪ್ಪಟ ತುಪ್ಪ ಮತ್ತು ಒಂದು ಬಿಲ್ಲೆ ಕರ್ಪೂರ ಇದಿಷ್ಟನ್ನು ಮುಲಾಮು ತಯಾರಿಸಿ ಇದನ್ನು ಗಾಯಗಳಿಗೆ ಹಚ್ಚುವುದರಿಂದ ಶೀಘ್ರ ಗುಣಕಂಡು ಬರುವುದು.
ಸುಟ್ಟ ಗಾಯಕ್ಕೆ ಮದ್ದು:
• ಸುಟ್ಟ ಗಾಯಕ್ಕೆ ಎಳ್ಳೆಣ್ಣೆ ಅಥವಾ ಜೇನುತುಪ್ಪ ದಿನ ಪ್ರತಿ ಹಚ್ಚುವುದರಿಂದ ಬಹಳಷ್ಟು ಗುಣ ಉಂಟು.
• ದಾಳಿಂಬೆ ಗಿಡದ ಎಲೆಗಳನ್ನು ನುಣ್ಣಗೆ ಅರೆದು ಗಾಯಕ್ಕೆ ಲೇಪಿಸುವುದರಿಂದ ಉರಿ ಶಾಂತವಾಗುವುದು.
• ಚೆನ್ನಾಗಿ ತೊಳೆದ ಆಲೂಗಡ್ಡೆಯನ್ನು ನುಣ್ಣಗೆ ಅರೆದು ಗಾಯಕ್ಕೆ ಪಟ್ಟು ಹಾಕಿ ಈ ಚಿಕಿತ್ಸೆಯಿಂದ ಉರಿ ಶಾಂತವಾಗುವುದು.
• ಒಣಗಿದ ಮಾವಿನ ಎಲೆಗಳನ್ನು ಸುಟ್ಟು ಬೂದಿ ಮಾಡಿ ಈ ಬೂದಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಸುಟ್ಟ ಗಾಯದ ಬೊಬ್ಬೆಗಳಿಗೆ ಲೇಪಿಸಿ ಉರಿ ಶಾಂತ ವಾಗುವುದು ಮತ್ತು ನೋವು ಕಡಿಮೆಯಾಗುವುದು.
ಊತ ನಿವಾರಣೆಗೆ:
• ಕೆಸುವಿನ ದಂಟಿನಿಂದ ರಸ ಹಿಂಡಿ ಈ ರಸದಲ್ಲಿ ಅಡುಗೆ ಉಪ್ಪು ಅರೆದು, ಊತವಿರುವ ಭಾಗದ ಮೇಲೆ ಲೇಪಿಸಿ ಊತ ಇಳಿದು ಆರಾಮ ವಾಗುವುದು.
• ಶ್ರೀಗಂಧದ ಚೆಕ್ಕೆಯನ್ನು ನೀರಿನಲ್ಲಿ ತೇದು ಗಂಧದಗಿರಿ, ಈ ಕಂದವನ್ನು ಹೂತವಿರುವ ಭಾಗಕ್ಕೆ ಲೇಪಿಸಿ.
• ಗೋದಿ ಹಿಟ್ಟು ಮತ್ತು ಬಾಳೆಹಣ್ಣಿನ ತಿರುಳನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಬೆಳೆ ಬೇಯಿಸಿ ಬಿಸಿಯಾದ ಈ ಪದಾರ್ಥವನ್ನು ಊತ ವಿರುವ ಭಾಗದ ಮೇಲೆ ಲೇಪಿಸಿ ಕಟ್ಟುಕಟ್ಟಿ ಚರ್ಮಕ್ಕೆ ಚರ್ಮಕ್ಕೆ ಬಿಸಿ ತಗುಲಿ ಉಂಟಾಗಿದ್ದರೆ ಈ ಚಿಕಿತ್ಸೆಯಿಂದ ಶೀಘ್ರ ಪರಿಹಾರ ಕಂಡುಬರುವುದು.
ಉಗುರು ಸುತ್ತಿಗೆ:
• ರಸವತ್ತಾದ ನಿಂಬೆಹಣ್ಣು ಆರಿಸಿ ತನ್ನಿ, ಬೆರಳಿನ ಸುತ್ತಳತೆಗೆ ಅನುಸಾರವಾಗಿ ಹಣ್ಣಿನಲ್ಲಿ ರಂದ್ರ ಕೊರಯಿರಿ, ಆ ನಿಂಬೆಹಣ್ಣನ್ನು ಉಗುರು ಸುತಾಗಿರುವ ಬೆರಳಿಗೆ ಸಿಕ್ಕಿಸಿ, ಎರಡು ಮೂರು ದಿನಗಳಲ್ಲಿ ಗುಣ ಕಂಡು ಬರುವುದು.
• ಒಂದು ಪರಂಗಿ ಎಲೆ ಒಂದು ಈರುಳ್ಳಿ, ಅರ್ಧ ಟೀ ಚಮಚ ಅರಿಶಿಣದ ಪುಡಿ ಈ ಮೂರನ್ನು ಚೆನ್ನಾಗಿ ಅರೆದು ಉಗುರು ಸುತಾಗಿರುವ ಭಾಗದ ಮೇಲೆ ಲೇಪಿಸಿ, ಕಟ್ಟು ಕಟ್ಟಿ ತೇವ ಸೋಂಕದಂತೆ ಬ್ಯಾಂಡೇಜ್ ಮಾಡಿ, ಶೀಘ್ರ ಗುಣ ಕಂಡುಬರುವುದು.
ಕುರು ಹೊಡೆದಿರುವಾಗ ಮದ್ದು:
• ನೇಂದ್ರ ಬಾಳೆತಿರುಳನ್ನು ನುಣ್ಣಗೆ ಕ್ಯೂಚಿ ಕುರುವಿನ ಮೇಲೆ ಲೇಪಿಸಿ, ಕೀವು ಸುರಿದು ಹೋಗಿ ನೋವು ಕಡಿಮೆಯಾಗುವುದು. ಕ್ರಮೇಣ ವ್ರಣ ಮಾಯವಾಗುವುದು.
ಹಳೆ ಗಾಯಗಳಿಗೆ ಮದ್ದು:
• ಗಾಯದ ಮೇಲೆ ಅಳಲೆಯ ಕಾಯಿ ಚೂರ್ಣವನ್ನು ಉದುರಿಸುತ್ತಿದ್ದರೆ ಶೀಘ್ರ ಗುಣ ಕಂಡುಬರುವುದು.
• ಸ್ವಮೂತ್ರದಿಂದ ಗಾಯವನ್ನು ದಿನಕ್ಕೆರಡು ಬಾರಿ ತೋಯಿಸುತ್ತಿದ್ದರೆ ಗಾಯ ಬಹುಬೇಗ ಗುಣವಾಗುವುದು.
ವ್ರಣಗಳಿಗೆ ಮುಲಾಮು:
• ಕೀವು ಸುರಿಯುವ ಹುಣ್ಣುಗಳನ್ನು ಬೆಳ್ಳುಳ್ಳಿ ಕಷಾಯದಿಂದ ತೊಳೆದ ನಂತರ ಆ ಹುಣ್ಣುಗಳಿಗೆ ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಅರೆದು ತಯಾರಿಸಿದ ಮುಲಾಮನ್ನು ಹಚ್ಚುತ್ತಿದ್ದರೆ ಶೀಘ್ರ ಗುಣ ಕಂಡುಬರುವುದು.
• ಬೆಳ್ಳುಳ್ಳಿ ಹೊಂಗೆ ಬೀಜ ಮತ್ತು ಉಪ್ಪು ಇವನ್ನು ನಯವಾಗಿ ಅರೆದು ಲೇಪಿಸುವುದರಿಂದ ಹಳೇ ಗಾಯಗಳು ಮತ್ತು ರಣಗಳು ಬೇಗ ಮಾಯುವುವು.
ಮೂಗು ಪೆಟ್ಟಿನಿಂದ ಆಗುವ ನೋವು ನಿವಾರಣೆಗೆ:
• ಹುಣಸೆ ಗೊಜ್ಜಿಗೆ ಸ್ವಲ್ಪ ಬೆಲ್ಲ ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಕುದಿಸಿ ಬಿಸಿ ಹಾದವರಿತು, ನೋವಿರುವ ಭಾಗದ ಮೇಲೆ ಗೊಜ್ಜನ್ನು ಲೇಪಿಸಿ ಅಥವಾ ಬಿಸಿ ಗೊಜ್ಜಿನಲ್ಲಿ ಅದ್ದಿದ ಬಟ್ಟೆಯ ಪಟ್ಟಿಯನ್ನು ನೋವಿರುವ ಭಾಗದ ಮೇಲೆ ಸುತ್ತಿ ಕಟ್ಟು ಕಟ್ಟಿ.
ಗಾಯದಿಂದ ರಕ್ತಸ್ರಾವ ತಡೆಗಟ್ಟಲು:
• ಕಾಶಿ ಕಣಗಿಲೆ ವರ್ಷವಿಡಿ ಕೆಂಪು ಮತ್ತು ಬಿಳಿ ಹೂವುಗಳನ್ನು ಬಿಡುವ ಹೆಚ್ಚು ಎತ್ತರಕ್ಕೆ ಬೆಳೆಯದ ಹೂ ಗಿಡ. ಇದೊಂದು ಅತ್ಯುತ್ತಮ ಔಷಧಿಯ ಸಸ್ಯ. ಈ ಸಸ್ಯದ ಹಸಿರೆಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕುವುದರಿಂದ ಗಾಯದಿಂದ ಒಸರುವ ರಕ್ತಸ್ರಾವಕ್ಕೆ ತಡೆಉಂಟಾಗುವುದು ಮತ್ತು ಗಾಯಕ್ರಮೇಣ ಒಣಗುವುದು ಆದರೆ ಎಲೆಗಳನ್ನು ಒಣಗಿಸಿ ಚೂರ್ಣ ತಯಾರಿಸಿ ಇಟ್ಟುಕೊಂಡಿದ್ದರೆ ಹೆಚ್ಚು ಉಪಯುಕ್ತವೆನ್ನಬಹುದು. ಈ ಚೂರ್ಣವನ್ನು ರಕ್ತ ಒಸರುವ ಗಾಯದ ಮೇಲೆ ಅದನ್ನು ಇಟ್ಟು ಬ್ಯಾಂಡೇಜ್ ಕಟ್ಟಿದರೆ ಶೀಘ್ರ ಗುಣ ಕಂಡುಬರುವುದು.
ಉಳುಕಿರುವಾಗ:
• ರಬ್ಬರ್ ಚೀಲ ಅಥವಾ ಗಾಜಿನ ಬಾಟಲಿಯಲ್ಲಿ ಬಿಸಿ ನೀರು ತುಂಬಿ, ಶಾಖ ಕೊಡಿ
• ಬಿಸಿ ಮಾಡಿದ ಹುಣಸೆ ಗೊಜ್ಜನ್ನು ಹುಡುಕಿರುವ ಹಾಗೂ ಊಟವಿರುವ ಭಾಗದ ಮೇಲೆ ಲೇಪಿಸುವುದರಿಂದ ನೋವು ಶಾಂತವಾಗುವುದು
• ವೀಳ್ಯದ ಸುಣ್ಣವನ್ನು ಜೇನುತುಪ್ಪದಲ್ಲಿ ರಂಗಳಿಸಿ, ಲೇಪಿಸಿ ಉಳುಕಿರುವ ಭಾಗದ ಮೇಲೆ ಲೇಪಿಸಿ.
• ಉಳುಕಿದ ದೆಸೆಯಿಂದ ಅಥವಾ ಶಾಖಸ್ಪರ್ಶದ ದೆಸೆಯಿಂದ ಊತ ಕಂಡು ಬಂದಲ್ಲಿ, ನುಣ್ಣಗೆ ಅರೆದ ಮೆಂತ್ಯದ ಸೊಪ್ಪಿನೊಂದಿಗೆ ನಿಂಬೆರಸ ಕೂಡಿಸಿ, ಊತ ವಿರುವ ಭಾಗದ ಮೇಲೆ ಪಟ್ಟು ಹಾಕಿ.
• ಸ್ವಲ್ಪ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿ, ಈ ಬೆಲ್ಲದ ಪುಡಿಯೊಂದಿಗೆ ಸಾಕಷ್ಟು ತುಪ್ಪ ಸೇರಿಸಿ ಮಿಶ್ರಣವನ್ನು ಬಿಸಿ ಮಾಡಿ ಇದನ್ನು ಬಿಸಿಯ ಹದವರಿತು ಉಳಿಕಿರುವ ಭಾಗದ ಮೇಲೆ ಲೇಪಿಸಿ, ಕಟ್ಟು ಕಟ್ಟಿ ಈ ಚಿಕಿತ್ಸೆಯಿಂದ ನೋವು ಕಡಿಮೆಯಾಗಿ ಊತ ಇಳಿಯುವುದು.