ಚಿತ್ರದುರ್ಗ: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೂ ಬರೋಬ್ಬರಿ 17ರ ಪೈಕಿ 13 ಜನರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಘಟನೆ ಬಳಿಕ ನಾಪತ್ತೆ ಆಗಿದ್ದರು. ಇದೀಗ ಆ ನಾಲ್ವರ ಪೈಕಿ ಕೇಸ್ ನ 8ನೇ ಆರೋಪಿ ಆಗಿರುವ ಆಟೋ ಚಾಲಕ ರವಿಶಂಕರ್ ಇಂದು ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಶರಣಾಗಿದ್ದಾರೆ.
ಡಿವೈಎಸ್ಪಿ ದಿನಕರ್ ಎದುರು 8ನೇ ಆರೋಪಿ ರವಿಶಂಕರ್ ಶರಣಾಗಿದ್ದಾನೆ. ಘಟನೆ ಬಗ್ಗೆ ಟ್ಯಾಕ್ಸಿ ಚಾಲಕರ ಸಂಘದ ಮುಖಂಡರ ಬಳಿ ರವಿ ವಿಷಯ ತಿಳಿಸಿದ್ದಾರೆ. ಬಾಡಿಗೆಗೆಂದು ಕರೆದೊಯ್ದು ಸಂಕಷ್ಟಕ್ಕೆ ಸಿಲುಕಿಸಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಟ್ಯಾಕ್ಸಿ ಸಂಘದವರ ಸಹಾಯ ಕೇಳಿಬಂದಿದ್ದ ಚಾಲಕ ರವಿಶಂಕರ್ನನ್ನು ಡಿವೈಎಸ್ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದಾರೆ.
ಬಾಡಿಗೆಗೆಂದು ಹೇಳಿ ಜಗದೀಶ್, ರಾಘವೆಂದ್ರ ಕರೆಸಿಕೊಂಡಿದ್ದರು. ಆಟೋದಲ್ಲಿ ರೇಣುಕಾಸ್ವಾಮಿ ಕರೆತಂದಿದ್ದರು. ಚಿತ್ರದುರ್ಗ ತಾಲೂಕಿನ ಕುಂಚಿಗನಾಳ ಬಳಿಗೆ ಆಟೋದಲ್ಲಿ ಬಂದಿದ್ದರು. ಕುಂಚಿಗನಾಳ ಗ್ರಾಮದ ಬಳಿ ರೇಣುಕಾಸ್ವಾಮಿ ಕಾರು ಹತ್ತಿಸಿದ್ದರು.
ದರ್ಶನ್ ಭೇಟಿಗೆಂದು ಹೇಳಿ ರೇಣುಕಾಸ್ವಾಮಿಯನ್ನು ಗ್ಯಾಂಗ್ ಕರೆತಂದಿತ್ತು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದನೆಂದು ಮಾಹಿತಿ ನೀಡಿದ್ದ. ನಂತರ ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿಯ ಪಟ್ಟಣಗೆರೆ ಶೆಡ್ಗೆ ರೇಣುಕಾಸ್ವಾಮಿ ಕರೆತಂದಿದ್ದರು. ಬಳಿಕ ದರ್ಶನ್ ಮತ್ತು ಗ್ಯಾಂಗ್ ನಿಂದ ಭಯಾನಕ, ಭೀಭತ್ಸ ಕೃತ್ಯವೊಂದು ನಡೆದು ಹೋಗಿತ್ತು. ರೇಣುಕಾಸ್ವಾಮಿಯ ಕೊಲೆ ನಡೆದು ಹೋಗಿತ್ತು.