ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಲೇ ಗೀತ ಕಾರ್ನಲ್ಲಿ  ಹೊರಟ್ಯಾ

ಗೀತಾ : ನೋಡಿ ಒಂದು ವಿಚಾರ ಹೇಳೋದು ಮರೆತ್ತಿದೆ ನಾನು ಮಾತ್ರ ಕಾರು ಹತ್ತೊಲ್ಲ. ಆ ಡ್ರೈವರ್ ಎರಡು ಬಾರಿ ಆಕ್ಸಿಡೆಂಟ್ ಮಾಡಿದ.ನಾನು ಬದುಕುಳಿದಿದ್ದೇ ಆಶ್ಚರ್ಯ.ಮೊದಲು ಆ ಡ್ರೈವರ್ನ  ತೆಗೆದು ಹಾಕಿ.

ರಾಜು : ದುಡುಕಬೇಡ. ಇನ್ನೊಂದು ಅವಕಾಶ ಕೊಡೋಣ ಹಾಗೇ ನಾದರೂ ಅವನು ಮತ್ತೆ ಆಕ್ಸಿಡೆಂಟ್ ಮಾಡಿ ನಿನ್ನ ಪ್ರಾಣ ಕಳುದ್ರೆ ಅವನನ್ನ ಒಂದು ಕ್ಷಣ ಇಟ್ಕೊಳ್ಳೋದಿಲ್ಲ.

***

 ಅಟೆಂಡರ್ : ಸರ್ ನಮಸ್ಕಾರ. ತಾವು ಯಾರೋ ಗೊತ್ತಾಗಲಿಲ್ಲ.

ರಾಜು : ನಾನು ಆಫೀಸಿಗೆ ಮ್ಯಾನೇಜರ್ ಆಗಿ ಬಂದಿದ್ದೇನೆ.

ಅಟೆಂಡರ್ : ಹೌದಾ ಸಾರ್?ನಾನು ತಮ್ಮ ದಾರಿನೇ ಕಾಯ್ತಾ ಇದ್ದೆ.  ರಾಜು : ಸರಿ ನಡಿ ಕಚೇರಿ ತೋರಿಸು.

ಅಟೆಂಡರ್ : ಬನ್ನಿ ಸರ್.

 ರಾಜು : ಲೇ ನಾನು ಈ ಕಚೇರಿ ಮ್ಯಾನೇಜರ್ ಎಂಬುದು ಮರಿಬೇಡ. ನಾನು ಕೆಲಸ ಮಾಡೋ ಕಚೇರಿ ಇಷ್ಟ ಸಣ್ಣದೇನೇಯ್ಯ.

 ಅಟೆಂಡರ್ : ಸಾರ್, ಇದು, ನಿಮ್ಮ ಕಛೇರಿಯಲ್ಲ.ಕಚೇರಿಯವರೆಗೆ ಹೋಗಲು ಲಿಫ್ಟ್.

***

 ಪೂಜಾರಿ : ಮಂಗಳಾರತಿ ಯಾರ ಹೆಸರಿಗೆ ಮಾಡ್ಲಿ?

ರಾಜು : ನನ್ನ ಹೆಂಡ್ತಿ ಹೆಸರಿಗೆ ಮಾಡಿ. 

ಪೂಜಾರಿ ಏಕೆ ನಿಮ್ಮ ಹೆಸರಿಗೆ ಬೇಡ್ವಾ?

 ರಾಜು ನನಗಾಗಲೇ ಮನೆಯಲ್ಲಿ ಆಗಿದೆ.