ಮನೆ ಅಪರಾಧ ರೇಣುಕಸ್ವಾಮಿ ಕೊಲೆ ಪ್ರಕರಣ: ಇಂದು ಆರೋಪಿಗಳು ನ್ಯಾಯಲಯಕ್ಕೆ ಹಾಜರು ಸಾಧ್ಯತೆ

ರೇಣುಕಸ್ವಾಮಿ ಕೊಲೆ ಪ್ರಕರಣ: ಇಂದು ಆರೋಪಿಗಳು ನ್ಯಾಯಲಯಕ್ಕೆ ಹಾಜರು ಸಾಧ್ಯತೆ

0

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿಯನ್ನು ‌ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳನ್ನು ಇಂದೇ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ‌ಇದೆ.

Join Our Whatsapp Group

ಸ್ಥಳ ಮಹಜರು, ವಿಚಾರಣೆ ಹಾಗೂ ಸಾಕ್ಷ್ಯಾಧಾರ ಕಲೆ ಹಾಕುವ ಕಾರ್ಯವನ್ನು ಬಹುತೇಕ ‌ಪೂರ್ಣಗೊಳಿಸಿರುವ ಪೊಲೀಸರು ಒಂದು ದಿನ ಮೊದಲೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ದತೆ ನಡೆಸಿದ್ದಾರೆ. ಇದಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶುಕ್ರವಾರ ರಾತ್ರಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನ್ನಪೂರ್ಣೇಶ್ವರಿನಗರ‌ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಈತ ಆರೋಪಿಗಳ ಮೊಬೈಲ್ ದತ್ತಾಂಶ ಸೇರಿದಂತೆ ಇತರೆ‌ ದಾಖಲೆಗಳ ನಾಶಕ್ಕೆ ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದರು.

ಕೊಲೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗಿದೆ. ಇಂದು ಮಧ್ಯಾಹ್ನ ಇಲ್ಲವೇ ಸಂಜೆ ವೇಳೆ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು. ನ್ಯಾಯಾಂಗ ಬಂಧನ ವಿಧಿಸಿದರೆ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ‌ಕಾರಾಗೃಹಕ್ಕೆ‌ ಬಿಡಲಾಗುವುದು ಎಂದು ಪೊಲೀಸರು ಹೇಳಿದರು.

ಪರಪ್ಪನ ಅಗ್ರಹಾರ ಕಾರಾಗೃಹದ ಸುತ್ತಮುತ್ತ ಭದ್ರತೆ ‌ಕೈಗೊಳ್ಳಲಾಗಿದೆ.

ಹಿಂದಿನ ಲೇಖನಆಕ್ರಮಣಕಾರಿ ವಿದೇಶಿ ನಾಯಿಗಳ ನಿಷೇಧ ಪ್ರಕರಣ: ಶ್ವಾನಗಳ ಸೈಕಾಲಜಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಆದೇಶ
ಮುಂದಿನ ಲೇಖನಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಸಚಿವ ಹೆಚ್ ​ಡಿ ಕುಮಾರಸ್ವಾಮಿ