ಮನೆ ಸ್ಥಳೀಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು: ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು: ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್

0

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು ಸಹ ತೆರೆಯಲಿದೆ. ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತದೆ. ಆದರೆ ಈ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ವಾರದ ರಜೆ ರದ್ದು ಮಾಡಿ, ಎಂದಿನಂತೆ ಮೃಗಾಲಯ ತೆರೆದಿರಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರವಾಸಿಗರ ಆಗಮನದ ಪ್ರಮಾಣದಲ್ಲಿ ದಾಖಲೆ

ಸಾಲು ಸಾಲು ರಜೆಯ ಕಾರಣದಿಂದಾಗಿ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ದಿನಗಳಲ್ಲಿ ಒಟ್ಟು 77,833 ಮಂದಿ ಬಂದಿದ್ದರು.

ಕ್ರಿಸ್‌ಮಸ್‌ ದಿನವಾದ ಸೋಮವಾರ 35,344 ವೀಕ್ಷಕರು ಭೇಟಿ ನೀಡಿದ್ದರು. ಭಾನುವಾರ (ಡಿ.24) ದಾಖಲೆಯ 40,761 ಜನ ಬಂದಿದ್ದರು. 2018ರ ಡಿ.24ರಂದು 40,675 ಸಂದರ್ಶಕರು ಭೇಟಿ ನೀಡಿದ್ದರು ಎಂದು ಮೃಗಾಲಯ ತಿಳಿಸಿತ್ತು.

ಹಿಂದಿನ ಲೇಖನದೆಹಲಿಯಲ್ಲಿ ದಟ್ಟ ಮಂಜು: ಇಂದು 5 ವಿಮಾನಗಳ ಪಥ ಬದಲಾವಣೆ, 30 ವಿಮಾನಗಳ ಹಾರಾಟ ವಿಳಂಬ
ಮುಂದಿನ ಲೇಖನಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ ನಾಗೇಹನಹಳ್ಳಿಯಲ್ಲಿ  ಸೆಕ್ಷನ್​ 144 ಜಾರಿ, ಶ್ರೀರಾಮ ಸೇನೆ ಮುಖಂಡ ರಂಜಿತ್ ಶೆಟ್ಟಿ ಅರೆಸ್ಟ್​