ಮನೆ ಸುದ್ದಿ ಜಾಲ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಆಗ್ರಹ

ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಆಗ್ರಹ

0

ಮೈಸೂರು: ನಡೆದಾಡುವ ದೇವರು,ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳವರ 3ನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದ ಹಿನ್ನೆಲೆ ಜೆಪಿನಗರ ಶರಣ ವೇದಿಕೆಯ ಆಶ್ರಯದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಶಿವಕುಮಾರಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕೋವಿಡ್ ನಿಯಮದಡಿ ಸರಳವಾಗಿ ಸ್ಮರಿಸಲಾಯಿತು.

ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ , ಶ್ರೇಷ್ಟ ಮಹಾನ್ ಚೇತನ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ  ಮರಣೋತ್ತರವಾಗಿ ದೇಶದ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗ್ರಹಿಸಿದರು.

ಡಾ.ಶಿವಕುಮಾರ ಮಹಾಸ್ವಾಮಿಗಳವರ ಹೆಸರು ಕೇಳಿದರೆ  ಒಂದು ಕ್ಷಣ ಮೈನಡುಕ ಉಂಟಾಗುತ್ತದೆ. ಸಾಮಾನ್ಯ ಮನುಷ್ಯರಾಗಿ ಈ ನಾಡಿನಲ್ಲಿ ಹುಟ್ಟಿ ತಮ್ಮ ಬದುಕಿನಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳು,ಸೇವೆಗಳ ಮೂಲಕ ಜನಮಾನಸದ ನಡುವೆ ದೇವರಾಗಿ ಜಗತ್ತನ್ನು ತೊರೆದಂತಹ ಮಹಾಮಾನವತವಾದಿ ಶಿವಕುಮಾರಸ್ವಾಮಿಗಳು ಎಂದರು.

ಒಂದೊತ್ತು ಊಟ ಹಾಕಿ ಬೆನ್ನು ತಟ್ಟಿಕೊಳ್ಳುವಂತಹ ಈ ಕಾಲಘಟ್ಟದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಕೆಯನ್ನು ನೀಡಿ,ಅನ್ನದಾಸೋಹವನ್ನು ನೀಡಿ,ವಸತಿ ನೆರಳನ್ನು ನೀಡಿ ಅದೆಲ್ಲಕ್ಕಿಂತ ಮಿಗಿಲಾಗಿ ಸಮಾಜದ ಸತ್ಪ್ರಜೆಯಾಗಿ ತಯಾರು ಮಾಡುವ ಕೆಲಸ ಅವರ ಮಾರ್ಗದರ್ಶನಲ್ಲಿ ನೆಡೆದಿದೆ ಹಾಗಾಗಿ ಅವರು ಜನರ ನಡುವಿನ ದೇವರಾಗಿ ವಿಭಿನ್ನ ಶಕ್ತಿಯಾಗಿದ್ದರು. ಅವರು ಬದುಕಿದ್ದ ವರೆಗೂ ಅವರು ಮಾಡಿದ ಕಾರ್ಯಸಾಧನೆಗಳು ಆಕಾಶದೆತ್ತರ ಮುಟ್ಟಿದ್ದರೂ ಎಂದು ತಲೆ ಎತ್ತಿ ಮಾತನಾಡಲಿಲ್ಲ ಅಂತಹ ಶ್ರೇಷ್ಠ ಧಾರ್ಮಿಕ ಸಂತ ಶ್ರೇಷ್ಠರು ಶಿವಕುಮಾರಸ್ವಾಮಿಗಳಾಗಿದ್ದರು.ಅವರ ಆಶ್ರಯದಲ್ಲಿ ಬೆಳೆದ ಅದೆಷ್ಟೋ ಚೇತನಗಳು ವಿಶ್ವದಾದ್ಯಂತ ಬೆಳಕನ್ನು ಚೆಲ್ಲುವ ಮೂಲಕ ಸ್ವಾಮೀಜಿಯವರ ಕೀರ್ತಿಯನ್ನು ಜಗದಗಲಕ್ಕೆ ಹರಡಿದ್ದಾರೆ. ಅವರ ನಿಧನದ ದಿನ ಸೇರಿದ್ದ ಜನಸ್ತೋಮ ಅಲ್ಲಿನ ಮಠದ ಶಿಸ್ತು ಇಡೀ ದೇಶವೇ ಮೆಚ್ಚಿದೆ.ಒಂದು ಸರ್ಕಾರವೂ ಮಾಡಲಾಗದಂತಹ ಸೇವೆಗಳನ್ನು ಸಿದ್ಧಗಂಗಾ ಸಂಸ್ಥೆ ಶಿವಕುಮಾರಸ್ವಾಮಿಗಳ ಮಾರ್ಗದರ್ಶನಲ್ಲಿ ಮಾಡಿದೆ ಎಂದರೆ ಅತಿಶಯೋಕ್ತಿಯೇನಿಲ್ಲ .ಅಂತಹ ಮಹಾನ್ ಪುರುಷರ ಪುಣ್ಯಸ್ಮರಣೆ ಮಾಡುವುದು ನಮ್ಮೆಲ್ಲರ ಪುಣ್ಯ. ಅಂತಹವರ ಹಾಕಿಕೊಟ್ಟ  ದಾರಿಯಲ್ಲೂ ನಾವೆಲ್ಲರೂ  ನಡೆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಈ ವೇಳೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹೆಚ್ ಎಂ ಗಣೇಶ್ ಪ್ರಸಾದ್,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ವೀರಶೈವ ಮುಖಂಡರಾದ ಕಬ್ಬಳ್ಳಿ ಮಹೇಶ್,ಮಾಜಿ ಜಿಲ್ಲಾಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್ ಕುಮಾರ್,ಆರ್ ಡಿ ವಿಶ್ವನಾಥ್,ಕೇಬಲ್ ಶೇಖರ್,ಎಸ್ ಎಂ ಪ್ರವೀಣ್,ಋಷಭೇಂದ್ರಪ್ಪ,ಹದಿನಾರು ಮಹೇಶ್,ವಕೀಲರಾದ ಶಶಿಕಿರಣ್,ಶ್ರೀಕಂಠಸ್ವಾಮಿ,ಯೋಗೇಶ್ ಉಪ್ಪಾರ್,ಟಿವಿ ಸುಂದರ್ ಕುಮಾರ್,ಜಗನ್ನಾಥ್ ಭೋವಿ, ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನವಾದದಲ್ಲಿ ಈ ಐದು ರಾಶಿಯವರನ್ನು ಮೀರಿಸುವುದು ಕಷ್ಟ
ಮುಂದಿನ ಲೇಖನಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು