ಮನೆ ಜ್ಯೋತಿಷ್ಯ ಜಲಾಶಯ, ತೋಟ ಹಾಗೂ ದೇವ ಪ್ರತಿಷ್ಠಾ ಮುಹೂರ್ತ

ಜಲಾಶಯ, ತೋಟ ಹಾಗೂ ದೇವ ಪ್ರತಿಷ್ಠಾ ಮುಹೂರ್ತ

0

 ಜಲಾಶಯಾರಾಮಸುರಪ್ರತಿಷ್ಠಾ ಸೌಮ್ಯಾಯನೇ ಜೀವಶಶಾಝಕಶುಕ್ರೇ|

 ದೃಶ್ಯೇ ಮೃದುಕ್ಷಿಪ್ರಚರಧ್ರುವೇ ಸ್ಯಾತ್ಪಕ್ಷೇಸಿತೇ ಸ್ವರ್ಕ್ಷತಿಥಿಕ್ಷಣೇ ವಾ||

 ರಿಕ್ತೋರವರ್ಜ್ಯೇ ದಿವಸೇತಿಶಸ್ತಾ ಶಶಾಂಕಪಾಪೈಸ್ರಿಭವಾಂಗ ಸಂಸ್ಥೈಃ|

 ಶಿವೋನೃಯುಗ್ಮೇ ದ್ವಿತನೌ ಚ ದೇವ್ಯಃ ಸರ್ವ ಇಮೇ

ಸ್ಥಿರರ್ಕ್ಷೇಪುಷ್ಯೇ ಗ್ರಹಾ ವಿಘ್ನಪಯಕ್ಷಸರ್ಪಭೂತಾದಯೋಂತ್ಯೇ ಶ್ರವಣೇ ನಿಜಶ್ಚ||

Join Our Whatsapp Group

      ಉತ್ತರಾಯಣದ ಸೂರ್ಯನಲ್ಲಿ,ಗುರು ಚಂದ್ರ ಶುಕ್ರ ಉದಯದಲ್ಲಿ ಮೃದುಸಂಜ್ಞಕ,ಕ್ಷಿಪ್ರಸಂಜ್ಞಕ, ಚರಸಂಜ್ಞಕ, ನಕ್ಷತ್ರದಲ್ಲಿ ಶುಕ್ಲ ಪಕ್ಷದಲ್ಲಿ  ಯಾವ ದೇವತೆಯನ್ನು ಸ್ಥಾಪನೆ ಮಾಡುವುದು ಇದೆಯೋ ಆ ದೇವತೆಯ ನಕ್ಷತ್ರ ತಿಥಿ ಮತ್ತು ಮುಹೂರ್ತದಲ್ಲಿ ರಿಕ್ತಾ ತಿಥಿ ಮತ್ತು  ಮಂಗಳವಾರವನ್ನು ಬಿಟ್ಟು ಅನ್ಯ ತಿಥಿ ಮತ್ತು ದಿನಗಳಲ್ಲಿ ಚಂದ್ರ ಮತ್ತು ಪಾಪ ಗ್ರಹ 3/6/ 11 /ಈ ಭಾವಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ಥಿತವಿದ್ದರೆ ಪಾಪಗ್ರಹ 8/12 ಈ ಭಾವಗಳಲ್ಲಿ ಸ್ಥಿತವಿದ್ದರೆ ಅನ್ಯ ಯಾವುದಾದರೊಂದು ಭಾವದಲ್ಲಿದ್ದರೆ ಕೆರೆ, ಉದ್ಯಾನವನ ದೇವಮಂದಿರ ಇತ್ಯಾದಿಗಳ ಪ್ರತಿಷ್ಠಾಪನೆ ಶುಭವಾದುದು.

 ವಿಶೇಷ ಸಿಂಹ ಲಗ್ನದಲ್ಲಿ ಸೂರ್ಯ, ಕುಂಭ, ಲಗ್ನದಲ್ಲಿ ಬ್ರಹ್ಮ ಕನ್ಯಾ ಲಗ್ನದಲ್ಲಿ ವಿಷ್ಣು ಮಿಥುನ ಲಗ್ನದಲ್ಲಿ ಶಿವ, ದ್ವಿಸ್ವಭಾವ ಲಗ್ನದಲ್ಲಿ ದೇವಿ ಭಗವತಿ ಮುಂತಾದವರ ಚರ ಲಗ್ನದಲ್ಲಿ ಕ್ಷುದ್ರ ದೇವತೆಗಳ ಮತ್ತು ಸ್ಥಿರ ಲಗ್ನದಲ್ಲಿ ಸಮಸ್ತ ದೇವತೆಗಳ ಸ್ಥಾಪನೆ ಮಾಡಬೇಕು.ಚತುಃಷಷ್ಠಿ  ಇತ್ಯಾದಿ ಮತ್ತು ಸ್ಥಿರ ಲಗ್ನದಲ್ಲಿ ಸಮಸ್ತ ದೇವತೆಗಳ ಪುಷ್ಯ ನಕ್ಷತ್ರದಲ್ಲಿ ಚಂದ್ರಾಗ್ನಿ ಅಷ್ಟ ಗ್ರಹಗಳ, ರೇವತಿ ನಕ್ಷತ್ರಗಳಲ್ಲಿ ಗಣೇಶ,ಯಕ್ಷ,ನಾಗ, ಭೂತಾದಿಗಳ ಮತ್ತು ಶ್ರವಣ ನಕ್ಷತ್ರದಲ್ಲಿ ಬುಧದೇವನ ಸ್ಥಾಪನೆ ಮಾಡಬೇಕು.