ಮನೆ ಸುದ್ದಿ ಜಾಲ ಚಾಮರಾಜನಗರ ಜಿಲ್ಲಾಸ್ಪತ್ರೆ ಪುನರಾರಂಭ: ಹೋರಾಟಗಾರರ ಸಂಭ್ರಮ

ಚಾಮರಾಜನಗರ ಜಿಲ್ಲಾಸ್ಪತ್ರೆ ಪುನರಾರಂಭ: ಹೋರಾಟಗಾರರ ಸಂಭ್ರಮ

0

ಚಾಮರಾಜನಗರ(Chamarajanagar): ಜಿಲ್ಲಾ ಆಸ್ಪತ್ರೆಯನ್ನು ಪುನರ್ ಪ್ರಾರಂಭಿಸಿದ್ದಕ್ಕಾಗಿ ಹೋರಾಟಗಾರರು ಪಟಾಕಿ ಸಿಡಿಸಿ, ವೈದ್ಯರಿಗೆ ಸಿಹಿ ಹಂಚುವ ಮೂಲಕ ಸಂಭ್ರಮ ಪಟ್ಟರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಪಟಾಕಿ ಸಿಡಿಸಿ, ವೈದ್ಯರಿಗೆ ಹೂ ನೀಡಿ ಬರಮಾಡಿಕೊಂಡು ಸಂಭ್ರಮ ವ್ಯಕ್ತಪಡಿಸಿದರು.

 ಸಂದರ್ಭದಲ್ಲಿ ಹೋರಾಟಗಾರ ನಿಜ ಧ್ವನಿ ಗೋವಿಂದರಾಜು ಮಾತನಾಡಿ, ಮೆಡಿಕಲ್ ಕಾಲೇಜಿನಿಂದ ಜಿಲ್ಲಾ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಉಳಿಸಿ ಎಂದು ಹಲವಾರು ಸಂಘಟನೆಗಳು ಸತತವಾಗಿ ಹೋರಾಟ ಮಾಡಿದ್ದರು ಅದರ ಪರಿಣಾಮವಾಗಿ ಇಂದು ಆಸ್ಪತ್ರೆ ಮರು ಪ್ರಾರಂಭವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ವಿಶ್ವೇಶ್ವರಯ್ಯ, ಡಾ.ಕೃಷ್ಣಪ್ರಸಾದ್, ಡಾ.ಮಹೇಶ್, ಡಾ.ಮಾರುತಿ, ಡಾ.ಮಹೇಶ್ವರ್, ಡಾ.ನವೀನ್ ಚಂದ್ರ, ಹೋರಾಟಗಾರರಾದ ನಮ್ಮನೆ ಪ್ರಶಾಂತ್, ಕದಂಬ ಸೇನೆ ನಾ.ಅಂಬರೀಶ್, ಲಾಯರ್ ಪ್ರಸನ್ನಕುಮಾರ್, ಶಂಭು ನಾಯಕ್, ಜಿಲ್ಲಾಧ್ಯಕ್ಷ ಕುಮಾರ್, ಸಿದ್ಧಾರ್ಥ್, ತಿರು ಮಲ್ಲೇಶ್, ಸಿದ್ದೇಶ್ ಕುಮಾರ್, ಗೋವಿಂದರಾಜು, ಬಾಬು, ಅಸಾದುಲ್ಲಾ ಷರೀಫ್ ಹಾಗೂ ಇತರರು ಭಾಗವಹಿಸಿದ್ದರು.

ಹಿಂದಿನ ಲೇಖನದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಮುಂದಿನ ಲೇಖನನಾಪೋಕ್ಲುವಿನ ಶ್ರೀಮಕ್ಕಿ ಶಾಸ್ತಾವು ದೇವಾಲಯದಲ್ಲಿ ಕಳವು