ನವದೆಹಲಿ(NewDelhi): ರೈಲ್ವೆಯ ಪ್ರಯಾಣ ದರ 58 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 60 ವರ್ಷ ದಾಟಿದ ಪುರುಷರಿಗೆ ರಿಯಾಯಿತಿ ದರಗಳು ಅನ್ವಯವಾಗಿದ್ದು ಇದರ ಪರಿಣಾಮ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಪುನಃ ಆರಂಭಿಸಲು ಚಿಂತನೆ ನಡೆಸಿದೆ.
ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನೆಲ್ಲೆ, ರೈಲ್ವೆಯು ಪ್ರಯಾಣ ದರದಲ್ಲಿ ಕೆಲ ನಿಬಂಧನೆಗಳಿಗೆ ಒಳಪಟ್ಟು ಈ ಸೌಲಭ್ಯಗಳನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಈ ರಿಯಾಯಿತಿಗಳು ಜನರಲ್ ಹಾಗೂ ಸ್ಲೀಪರ್ ಕೋಚ್ ಗಳಲ್ಲಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. ಎಂದು ಹೇಳಿದ್ದಾರೆ.
ಈ ರಿಯಾಯಿತಿ ಸೌಲಭ್ಯವನ್ನು 70 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡುವ ಪ್ರಸ್ತಾವ ಇದೆ ಎಂದು ಇವೇ ಮೂಲಗಳು ಹೇಳಿವೆ.
‘ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿನ ರಿಯಾಯಿತಿಯನ್ನು ಮುಂದುವರಿಸುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮತ್ತೆ ಆರಂಭಿಸುವುದಕ್ಕೆ ಸಂಬಂಧಿಸಿ ನಮ್ಮ ಮುಂದಿರುವ ಆಯ್ಕೆಗಳಿವು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.