ಮೈಸೂರು(Mysuru): ಬಹಳಷ್ಟು ವರ್ಷ ನಿಷ್ಕ್ರಿಯವಾಗಿದ್ದಜಯನಗರದ ದಿ ಬಲಿಜ ಸಂಘಕ್ಕೆ ಪುನಶ್ಚೇತನ ನೀಡಲಾಗಿದೆ ಎಂದು ಗೌರವಾಧ್ಯಕ್ಷರಾದ ಮೀನಾ ತೂಗುದೀಪ ಶ್ರೀನಿವಾಸ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಲಿಜ ಸಮುದಾಯ ಪೂಜಾ ದ್ರವ್ಯಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತದೆ. ಬಲಿಜ ಸಂಘದ ದಾಖಲಾತಿಗಳು ಈಗ ಲಭ್ಯವಾಗಿದ್ದು, ಅದನ್ನು ನವೀಕರಿಸಲಾಗಿದೆ. ಆದ್ದರಿಂದ ಬಲಿಜ ಸಮುದಾಯದ ಸದಸ್ಯರು ಸದಸ್ಯರಾಗಬೇಕೆಂದು ಕೋರಿದರು.
ಜೊತೆಗೆ ಸಂಘವು ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ನೆರವಾಗುವ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಇನ್ನು, ಸರ್ಕಾರ ಸಮುದಾಯಕ್ಕೆ ನೀಡಿದ್ದ ೨ ಎ ಪೂರ್ಣ ಪ್ರಮಾಣದ ಮೀಸಲಾತಿ ಮಾರ್ಪಡಿಸಿ, ೩ ಎಗೆ ವರ್ಗಾಯಿಸಿರುವುದು ಸರಿಯಲ್ಲ. ಆದ್ದರಿಂದ ಅದನ್ನು ಮೊದಲಿನ ರೀತಿಯೇ ಮುಂದುವರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಯತಿರಾಜ್, ಚಿನ್ನಸ್ವಾಮಿ, ಎಂ.ಡಿ. ಶ್ರೀನಿವಾಸ್, ಎಂ.ಎಸ್. ಯೋಗೀಶ್, ಮಹೇಶ್‌ನಾಯ್ಡು, ಮಂಜುನಾಥ್, ಲಿಂಗರಾಜು ಹಾಜರಿದ್ದರು.