ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 88 ಜೂನಿಯರ್ ಅಸಿಸ್ಟೆಂಟ್, ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಮೇ 17ರೊಳಗೆ ಅರ್ಜಿ ಹಾಕಬೇಕು. ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.
ಹುದ್ದೆಯ ಮಾಹಿತಿ:
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- 10
ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್) (ಗ್ರೂಪ್-ಬಿ)- 1
ಅಸಿಸ್ಟೆಂಟ್ ಲೈಬ್ರರಿಯನ್ (ಗ್ರೂಪ್-ಸಿ)- 1
ಅಸಿಸ್ಟೆಂಟ್ (ಗ್ರೂಪ್-ಸಿ)-27
ಜೂನಿಯರ್ ಅಸಿಸ್ಟೆಂಟ್ (ಗ್ರೂಪ್-ಸಿ)- 49
ವಯೋಮಿತಿ ಸಡಿಲಿಕೆ:
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- ಮಾಸಿಕ ₹ 43,100-83,900
ಅಸಿಸ್ಟೆಂಟ್ ಎಂಜಿನಿಯರ್ (ಸಿವಿಲ್) (ಗ್ರೂಪ್-ಬಿ)- ಮಾಸಿಕ ₹ 43,100-83,900
ಅಸಿಸ್ಟೆಂಟ್ ಲೈಬ್ರರಿಯನ್ (ಗ್ರೂಪ್-ಸಿ)- ಮಾಸಿಕ ₹ 30,350-58,250
ಅಸಿಸ್ಟೆಂಟ್ (ಗ್ರೂಪ್-ಸಿ)- ಮಾಸಿಕ ₹37,900-70,850
ಜೂನಿಯರ್ ಅಸಿಸ್ಟೆಂಟ್ (ಗ್ರೂಪ್-ಸಿ)- ಮಾಸಿಕ ₹21,400-42,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17, 2023
ಇ-ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮೇ 20, 2023














