ಮನೆ ರಾಷ್ಟ್ರೀಯ 2021ರ ರಸ್ತೆ ಅಪಘಾತ ವರದಿ: ಹೆಲ್ಮೆಟ್ ಧರಿಸದ ಕಾರಣಕ್ಕೆ 46,593 ಜನರ ಸಾವು

2021ರ ರಸ್ತೆ ಅಪಘಾತ ವರದಿ: ಹೆಲ್ಮೆಟ್ ಧರಿಸದ ಕಾರಣಕ್ಕೆ 46,593 ಜನರ ಸಾವು

0

ನವದೆಹಲಿ(Newdelhi): ದೇಶದಲ್ಲಿ 2021 ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ 46,593 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 32,877 ಜನ ಸವಾರರಾದರೆ, 13,716 ಜನ ಪ್ರಯಾಣಿಕರು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ.

ಅಂತೆಯೇ 16,397 ಜನ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಮೃತರಲ್ಲಿ 8,438 ಚಾಲಕರು, 7,959 ಜನ ಪ್ರಯಾಣಿಕರು ಎಂದು ತಿಳಿದು ಬಂದಿದೆ.

ಒಟ್ಟು 4,12,432 ರಸ್ತೆ ಅಪಘಾತಗಳು ನಡೆದು 1,53,972 ಜನ ಪ್ರಾಣ ಕಳೆದುಕೊಂಡಿದ್ದಾರೆ. 3,84,448 ಜನ ಗಾಯಗೊಂಡಿದ್ದಾರೆ.

ಸೀಟ್ ಬೆಲ್ಟ್‌ ಧರಿಸದ ಅಪಘಾತಗಳಲ್ಲಿ 39,231 ಜನ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸದ ಅಪಘಾತಗಳಲ್ಲಿ 93,763 ಜನ ಗಾಯಗೊಂಡಿದ್ದಾರೆ.

ಹಿಂದಿನ ಲೇಖನಸುಮಲತಾ ಬಿಜೆಪಿ ಸೇರ್ಪಡೆ ವಿಚಾರ: ನಮ್ಮೊಂದಿಗೆ ಮಾತುಕತೆ ನಡೆದಿಲ್ಲವೆಂದ ನಳಿನ್‌ ಕುಮಾರ್‌ ಕಟೀಲ್‌
ಮುಂದಿನ ಲೇಖನಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ, ಯಾರೇ ಬಂದರೂ ಏನು ಆಗಲ್ಲ: ಶಾಸಕ ಅನ್ನದಾನಿ