ಮನೆ ಕ್ರೀಡೆ ಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ ರೋಹಿತ್ ಶರ್ಮಾ

ಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ ರೋಹಿತ್ ಶರ್ಮಾ

0

ಕೊಲಂಬೊ: ಏಷ್ಯಾ ಕಪ್ 2023ರ ಕೂಟದ ಪ್ರತಿಯೊಂದು ಪಂದ್ಯದಲ್ಲೂ ಭಾರತೀಯ ಆಟಗಾರರು ದಾಖಲೆಗಳನ್ನು ಬರೆಯುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.

ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಈ ಗಡಿ ದಾಟಿದರು. ಕಸುನ್ ರಜಿತಾ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಹತ್ತು ಸಾವಿರ ಏಕದಿನ ರನ್ ಕ್ಲಬ್ ಗೆ ಸೇರಿದರು.

ರೋಹಿತ್ ಶರ್ಮಾ ಅವರು ಹತ್ತು ಸಾವಿರ ರನ್ ಗಳಿಸಿದ ಭಾರತದ ಆರನೇ ಮತ್ತು ವಿಶ್ವದ 15ನೇ ಬ್ಯಾಟರ್ ಆಗಿ ಮೂಡಿಬಂದರು. ಹತ್ತು ಸಾವಿರ ಏಕದಿನ ರನ್ ಗಳಿಸಿದ 15 ಬ್ಯಾಟರ್‌ಗಳಲ್ಲಿ, ರೋಹಿತ್ ಅವರು ಸರಾಸರಿ (49.02 ಪ್ರಸ್ತುತ) ಯಲ್ಲಿ ಕೊಹ್ಲಿ (57.62) ಮತ್ತು ಧೋನಿ (50.57) ರಿಂದ ಮಾತ್ರ ಹಿಂದಿದ್ದಾರೆ.

ಅಲ್ಲದೆ ಅತೀ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅತೀ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಹತ್ತು ಸಾವಿರ ರನ್

205 – ವಿರಾಟ್ ಕೊಹ್ಲಿ

241 – ರೋಹಿತ್ ಶರ್ಮಾ

259 – ಸಚಿನ್ ತೆಂಡೂಲ್ಕರ್

263 – ಸೌರವ್ ಗಂಗೂಲಿ

266 – ರಿಕಿ ಪಾಂಟಿಂಗ್

ಏಕದಿನದಲ್ಲಿ 10,000 ರನ್ ಗಳಿಸಿದ ಭಾರತೀಯರು

18426 – ಸಚಿನ್ ತೆಂಡೂಲ್ಕರ್

13024 – ವಿರಾಟ್ ಕೊಹ್ಲಿ

11363 – ಸೌರವ್ ಗಂಗೂಲಿ

10889 – ರಾಹುಲ್ ದ್ರಾವಿಡ್

10773 – ಎಂಎಸ್ ಧೋನಿ

10001 – ರೋಹಿತ್ ಶರ್ಮಾ