ಮನೆ ಕ್ರೀಡೆ ಅಭ್ಯಾಸದ ವೇಳೆ ರೋಹಿತ್ ಶರ್ಮಾ ತೋಳಿಗೆ ಪೆಟ್ಟು: ಆತಂಕದಲ್ಲಿ ತಂಡ

ಅಭ್ಯಾಸದ ವೇಳೆ ರೋಹಿತ್ ಶರ್ಮಾ ತೋಳಿಗೆ ಪೆಟ್ಟು: ಆತಂಕದಲ್ಲಿ ತಂಡ

0

ಅಡಿಲೇಡ್‌: ಇಂಗ್ಲೆಂಡ್‌ ವಿರುದ್ಧ ಇಲ್ಲಿನ ಅಡಿಲೇಡ್‌ ಓವಲ್‌ ಮೈದಾನದಲ್ಲಿ ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದ ನಿಮಿತ್ತ ಮಂಗಳವಾರ ನೆಟ್ಸ್‌’ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರ ತೋಳಿಗೆ ಚೆಂಡಿನ ಬಲವಾದ ಹೊಡೆತ ಬಿದ್ದಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಿದ್ದ ರೋಹಿತ್ ಅವರಿಗೆ ಎಸ್ ರಘು ಅವರು ಥ್ರೋ ಮಾಡುತ್ತಿದ್ದರು. ಈ ವೇಳೆ ಶಾರ್ಟ್ ಬಾಲ್ ರೋಹಿತ್‌ ಅವರ ಬಲ ಮುಂದೋಳಿಗೆ ಬಡಿದಿದ್ದು, ಅವರು ವಿಪರೀತ ನೋವು ಅನುಭವಿಸಿದರು.

ತೋಳಿಗೆ ಹೊಡೆತ ಬಿದ್ದ ನಂತರ ರೋಹಿತ್‌ ಅಭ್ಯಾಸದಿಂದ ನಿರ್ಗಮಿಸಿದರು. ನಂತರ ಬಲಗೈಗೆ ದೊಡ್ಡ ಐಸ್ ಪ್ಯಾಕ್ ಕಟ್ಟಲಾಗಿತ್ತು. ಅತೀವ ನೋವು ಅನುಭವಿಸುತ್ತಿದ್ದಂತೆ ಕಂಡ ರೋಹಿತ್‌ ದೂರದಿಂದಲೇ ತಂಡದ ಅಭ್ಯಾಸವನ್ನು ಗಮನಿಸುತ್ತಿದ್ದರು.

ಅಲ್ಲದೇ, ತಂಡದ ಆಪ್ತ ಸಮಾಲೋಚಕ ಪ್ಯಾಡಿ ಅಪ್ಟನ್ ಅವರೊಂದಿಗೆ ಅವರು ಸಾಕಷ್ಟು ಸಮಯದವರೆಗೆ ಚರ್ಚೆ ಮಾಡುತ್ತಾ ಇದ್ದದ್ದು ಕಂಡುಬಂದಿದೆ. ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ಗೆ ಇನ್ನು 48 ಗಂಟೆಗಳು ಬಾಕಿ ಉಳಿದಿವೆ.