ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ನಿರ್ಮಾಣದ ಮೂಲಕವೇ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವೊಂದು ಹೇಳಿದ್ದರು. ನೆಪೋಲಿಯನ್ ಬೋನೋಪಾರ್ಟಿ ತನ್ನ ದೇಶದ ಯಾವ ಜನಾಂಗದಲ್ಲಿ ದುರಭ್ಯಾಸಗಳು ಕಂಡು ಬಂದಾಗಲೇ ತಾನು ಸೋತು ಹೋಗಿದ್ದೆ ಎಂದು ಹೇಳಿದ್ದ. ಯಾವುದೇ ಸಾಮ್ರಾಜ್ಯ ನಾಶವಾದದ್ದು ಕೂಡ ಸಮಾಜದಲ್ಲಿ ಕೆಟ್ಟ ನಡವಳಿಕೆಗಳು ಕಂಡು ಬಂದಾಗ ಆದ್ದರಿಂದ ವ್ಯಕ್ತಿಯ ವ್ಯಕ್ತಿತ್ವವು ವ್ಯಕ್ತಿಗೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಮಹತ್ವದ ಆಗಿದೆ. ಎಂಬುದು ಅರ್ಥಮಾಡಿಕೊಳ್ಳಬೇಕು ನಾವು ಅತ್ಯುತ್ತಮ ವ್ಯಕ್ತಿತ್ವದವರಾಗುವುದೇ ರಾಷ್ಟ್ರಪಿಸಲು ಬಹಳ ದೊಡ್ಡ ಕೊಡುಗೆಯಾಗಿದೆ..
ವ್ಯಕ್ತಿತ್ವ ನಿರ್ಮಾಣದಲ್ಲಿ ಸೂಚನೆಗಳು ಸ್ವೀಕರಿಸುವುದು ಮುಖ್ಯ ಭಾಗಗಳಲ್ಲಿ ಒಂದಾಗಿದೆ ಸೂಚನೆಗಳಲ್ಲಿ ಹಲವು ವಿಧಗಳಿವೆ ಅವುಗಳಲ್ಲಿ ಮೊದಲನೆಯದು ಘನತೆಯ ಸೂಚನೆ, ಘನತೆಯ ಸೂಚನೆ ಎಂದರೆ ಹೆಚ್ಚು ಘನತೆ ಉಳ್ಳವರು ಹೇಳಿದ ಮಾತನ್ನು ಇತರರರು ಬಹಳ ಬೇಗ ಒಪ್ಪಿಕೊಳ್ಳುವುದು ದೊಡ್ಡ ವ್ಯಕ್ತಿಗಳ ನಡೆಯನ್ನು ಜನರು ಬೇಗ ಒಪ್ಪಿಕೊಂಡು ಬಿಡುತ್ತಾರೆ. ಉದಾಹರಣೆಗೆ, ಚಕ್ರವರ್ತಿಯ ಅಶೋಕ ಸಾಲುಮರಗಳನ್ನು ನಡೆಸಿದ್ದನು ಎನ್ನುವುದು ನಿಜವಾಗಿ ಸಾಲುಮರಗಳನ್ನು ನಡೆಸಿದವನು ಅಶೋಕ ಮಾತ್ರ ಅಲ್ಲ, ಅನೇಕ ಜನರು ನಡೆಸಿರುತ್ತಾರೆ ನಡೆಸಿರುತ್ತಾರೆ ಆದರೆ ಅವೆಲ್ಲ ಅವರೆಲ್ಲರೂ ಅಶೋಕನಷ್ಟು ಘನತೆಯವರಾಗಿರುವುದಿಲ್ಲ ಆದ್ದರಿಂದ ಘನತೆ ಉಳ್ಳವರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ ಹಾಗೆಯೇ ನಾವು ಹೇಳುವುದನ್ನು ಬೇರೆ ಅವರು ಒಪ್ಪಿಕೊಳ್ಳಬೇಕಾದರೆ ಅವರ ದೃಷ್ಟಿಯಲ್ಲಿ ನಾವು ಗೌರವಾನ್ವಿತ ವ್ಯಕ್ತಿಗಳಾಗಿರಬೇಕಾಗುತ್ತದೆ.
ಎರಡನೆಯದು “ಸಮೂಹ ಸೂಚನೆ” ಹಲವಾರು ಜನರು ಸೇರಿ ಒಂದು ಸೂಚನೆಯನ್ನು ನೀಡಿದರೆ ವ್ಯಕ್ತಿಯ ಅದನ್ನು ಬೇಗನೆ ಒಪ್ಪಿಕೊಳ್ಳುತ್ತಾನೆ ಇದೇ ಸಮೂಹ ಸೂಚನೆ. ಮೂರನೇದು “ಸ್ವಸೂಚನೆ” ಯಾವುದಾದರೂ ಒಂದು ವಿಚಾರದ ಬಗ್ಗೆ ತನ್ನೊಳಗೆ ಯೋಚಿಸುತ್ತಿದ್ದರೆ ಅವನಿಗೆ ಅಥವಾ ಅವಳಿಗೆ ಬೇಕಾದ ಸೂಚನೆಯೂ ಒಳಗಿನಿಂದಲೇ ಹುಟ್ಟಿಕೊಳ್ಳುತ್ತದೆ ಇದೇ ಸ್ವಾಸೂಚನೆ. ನಾಲ್ಕನೇದು “ವಿರೋಧ ಬಾಸ ಸೂಚನೆ” ವ್ಯಕ್ತಿಗೆ ಒಂದು ಸೂಚನೆಯನ್ನು ಕೊಟ್ಟಾಗ ಅವನು ಅಥವಾ ಅವಳು ಸೂಚನೆಗೆ ವಿರುದ್ಧವಾಗಿ ಏನನ್ನಾದರೂ ಮಾಡಿದರೆ ಅದು ವಿರೋಧಾಭಾಸದ ಸೂಚನೆಯಾಗಿದೆ ಚಿಕ್ಕ ಮಕ್ಕಳಲ್ಲಿ ಈ ರೀತಿಯ ಪ್ರವೃತ್ತಿ ಜಾಸ್ತಿ ಇರುತ್ತದೆ. ಐದನೇದು “ನಿಷೇಧಾತ್ಮಕ ಸೂಚನೆ” ಯಾವುದನ್ನು ಮಾಡಬಾರದು ಎಂದು ನೀಡುವ ಸೂಚನೆಗಳೆಲ್ಲವೂ ನಿಷೇಧಾತ್ಮಕ ಸೂಚನೆಗಳಾಗಿ ಇದು ಒಂದು ರೀತಿಯ ಯಾಂತ್ರಿಕ ನಡವಳಿಕೆಗೆ ಪ್ರೇರೇಪಿಸುತ್ತದೆ
ವ್ಯಕ್ತಿತ್ವದ ನಿರ್ಮಾಣವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೂಡಿ ಬರುವ ಇಂತಹ ಸೂಚನೆಗಳನ್ನು ಆಧರಿಸುತ್ತದೆ ಆದ್ದರಿಂದ ತನ್ನ ವ್ಯಕ್ತಿತ್ವ ವಿಕಾಸ ಆಗಬೇಕೆಂದು ಬಯಸುವವರೆಲ್ಲರೂ ಸೂಚನೆಗಳನ್ನು ಧಾರಾಳವಾಗಿ ಸ್ವೀಕರಿಸುವ ಪ್ರವೃತ್ತಿಯನ್ನು ರೂಡಿಸಿಕೊಳ್ಳಬೇಕು ಸ್ವೀಕರಿಸಿದ ಮಾತ್ರಕ್ಕೆ ಪಾಲಿಸಬೇಕೆಂದೇ ಪಾಲಿಸಬೇಕೆಂದಲ್ಲ ಪಾಲನೆಯು ಯಾವಾಗಲೂ ಸ್ವಚ್ಛನೆಯಿಂದಲೇ ನಡೆಯಬೇಕು ಸಾಕಷ್ಟು ಯೋಚಿಸಬೇಕು.