ಗುಲಾಬಿ ಹೂಗಳ ರಾಣಿ. ಪರ್ಶಿಯನ್ ಭಾಷೆಯ ಗುಲಾಬ್ ಎಂಬ ಪದವು ಕನ್ನಡದಲ್ಲಿ ಗುಲಾಬಿ ಎಂದಾಗಿದೆ.ಜಗತ್ತಿನ ಅತ್ಯಂತ ಪುರಾತನ ಗುಲಾಬಿ ಜರ್ಮನಿ ದೇಶದಲ್ಲಿ ಇದೆ. ಅದಕ್ಕೆ ಸುಮಾರು ಸಾವಿರ ವರ್ಷಗಳಿರಬೇಕೆಂಬ ಅಂದಾಜಿದೆ.ಗುಲಾಬಿಯು ಅತಿ ಪುರಾತನವಾದದ್ದು ಅಂದರೆ ಮಾನವನ ಉಗಮಕ್ಕಿಂತಲೂ ಮುಂಚಿನದು.
ಅಮೇರಿಕಾದ ಕೊಲೊರೊಡೊದಲ್ಲಿ ದೊರಕಿದ ಪಳೆಯುಳಿಕೆಯು ಸುಮಾರು 4 ಕೋಟಿ ವರ್ಷಗಳ ಹಿಂದಿನದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಮನುಷ್ಯನ ಮತ್ತು ಗುಲಾಬಿಯ ಸಂಬಂಧ ಐದು ಸಾವಿರ ವರ್ಷಗಳಷ್ಟು ಸುದೀರ್ಘಕಾಲ ಸಾಗಿಬಂದಿದೆ. ನಮ್ಮ ದೇಶಕ್ಕೆ ಐರೋಪ್ಯ ಗುಲಾಬಿಯನ್ನು ಎಂದು ಪರಿಚಯಿಸಿದ ಕೀರ್ತಿ ಮೊಗಲರದ್ದು ಬಾಬರ್ ಗುಲಾಬಿ ವ್ಯವಸಾಯಕ್ಕೆಉತ್ತೇಜನ ನೀಡಿದ ಪ್ರಮುಖ ಚಕ್ರವರ್ತಿ.ಗ್ರೀಕ್ ಮತ್ತು ರೋಮಾನ್ ಗ್ರಂಥಗಳಲ್ಲಿ ಗುಲಾಬಿಯನ್ನು ಪ್ರೇಮ ಮತ್ತು ಸೌಂದರ್ಯದ ಪತ್ರಿಕೆವೆಂದು ವರ್ಣಿಸಲಾಗಿದೆ.ನಮ್ಮ ದೇಶದ ಪುರಾಣದಲ್ಲಿಯೂ ಗುಲಾಬಿ ಪ್ರಮುಖ ಸ್ಥಾನ ಪಡೆದಿದೆ. ವಿಷ್ಣು ಕೊಳದಲ್ಲಿನ ಸ್ನಾನ ಮಾಡುವಾಗ ಅಲ್ಲಿ ಒಂದು ಕಮಲದ ಹೂ ಅರಳಿ ಅದರಿಂದ ಬ್ರಹ್ಮ ಹೊರಬಂದು ಅದನ್ನು ಹೂವೆಂದು ಬಣ್ಣಿಸುತ್ತಿರುವಾಗ ವಿಷ್ಣು ನಸುನಕ್ಕು ಬ್ರಹ್ಮನನ್ನು ವೈಕುಂಠಕ್ಕೆ ಕರೆದೊಯ್ದು ಗುಲಾಬಿ ಪೊದೆಯೊಂದನ್ನು ತೋರಿಸಿದಂನಂತೆ. ಅದರಲ್ಲಿದ್ದ ಕಂಪು ಬೀರುವ ಬಿಳಿ ಗುಲಾಬಿಯನ್ನು ವೀಕ್ಷಿಸಿದ ಬ್ರಹ್ಮ ಅದೇ ಸರ್ವಶೇಷ್ಠ ಹೂವೆಂದು ಒಪ್ಪಿಕೊಂಡನಂತೆ
ಇನ್ನು ಭೂಲೋಕದಲ್ಲಂತೂ ಗುಲಾಬಿಯ ಅಂದ, ಚಂದಕ್ಕೆ ಮನ ಸೋಲದವರೇ ಇಲ್ಲ. ಗುಲಾಬಿಯ ಪರಿಮಳ ದ್ರವ್ಯಗಳೆಂದರೆ ಗುಲಾಬಿ ಜಲ,ಅರ್ತ್ತರ್, ಗುಲಾಬಿ ಎಣ್ಣೆ ಪಾಂಕುರಿ ಮತ್ತು ಗುಲ್ಕಂದ್. ಗುಲಾಬಿ ಎಣ್ಣಿಗೆ ಹೊರದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಮುಖ್ಯವಾಗಿ ಅಮೇರಿಕಾ ಫ್ರಾನ್ಸ್, ಸ್ವಿಟ್ಜರ್ ಲ್ಯಾಂಡ್ ಮತ್ತು ಮಧ್ಯ ಯುರೋಪ್ ದೇಶಗಳಲ್ಲಿ ಆಂತರಿಕ ತಂಬಾಕು ಉದ್ದಿಮೆಗಳಲ್ಲಿ ಗುಲಾಬಿ ಜಲ ಮತ್ತು ತೈಲವನ್ನು ಚೆನ್ನಾಗಿ ಬಳಸುತ್ತಾರೆ.
ಸಸ್ಯ ವರ್ಣನೆ
ಡಮಾಸ್ಕ್ ಗುಲಾಬಿ ಇದು ರೋಸೆಸಿಯೆ ಕುಟುಂಬಕ್ಕೆ ಸೇರಿದೆ ಇದು ಗಡುತರ ಗಿಡವಾಗಿದ್ದು, ಕಾಂಡವು ಗಟ್ಟಿಯಾಗಿರುತ್ತದೆ ಹಾಗೂ ಕಾಂಡದ ಮೇಲೆಲ್ಲಾ ಗಟ್ಟಿಯಾದ ಮುಳ್ಳುಗಳು ಅವರಿಸಿಕೊಂಡಿರುತ್ತವೆ. ಕಾಂಡದ ಮೇಲೆ ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ. ಇದರಲ್ಲೂ ಕೆಂಪು, ಕೆಸರಿ,ಗುಲಾಬಿ ಮತ್ತು ಇತರೆ ಬಣ್ಣದ ಹೂಗಳನ್ನು ಕೊಡುವ ಗಿಡಗಳು ಇವೆ.
ಮಣ್ಣು :
ಗುಲಾಬಿಯು ವಿವಿಧ ರೀತಿಯ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಅಂದರೆ ಜೇಡಿಮಣ್ಣಿನಿಂದ ಹಿಡಿದು ಮರಳು ಮಿಶ್ರಿತ ಮಣ್ಣುಗಳವರೆಗೆ ಉಪಯೋಗಿಸಬಹುದು ಆದರೆ ಇದಕ್ಕೆ ತಟಸ್ಥ, ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಇದು ಹೆಚ್ಚಿನ ಸಾವಯವ ಪದಾರ್ಥಗಳಿರುವ ಮಣ್ಣು ಉತ್ತಮ.
ತಳಿಗಳು :
ನೂರ್ ಜಹಾನ್, ರಾಣಿ ಸಾಹೇಬ್ ಹಾಗೂ ಇತರೆ ತಳಿಗಳಿವೆ.
ಬೇಸಾಯ ಕ್ರಮಗಳು :
ಸುಗಂಧಯುದಕ್ತ ಗುಲಾಬಿಯನ್ನು ಕಟ್ಟುನಿಟ್ಟಾಗಿ ಕಣ್ಣು ಕಸಿಮಾಡುವ ಮೂಲಕ ಸಸ್ಯಾ ಭಿವೃದ್ಧಿಗೊಳಿಸಲಾಗುತ್ತದೆ.
ಸಸಿಮಡಿ ತಯಾರಿಕೆ :
ಸಾಕಷ್ಟು ನೀರು ಇರುವಂತಹ ಹೆಚ್ಚಿನ ಫಲವತ್ತತೆ ಇರುವ ಸ್ಥಳವನ್ನು ಆರಿಸಿಕೊಳ್ಳಬೇಕು. ಸಸಿ ಮಡಿಯನ್ನು ಚೆನ್ನಾಗಿ ಇಗೆದು ಕಳೆ ಬೇರುಗಳಿಂದ ಮುಕ್ತಗೊಳಿಸಬೇಕು. ಇದಕ್ಕೆ ಕೊಟ್ಟಿಗೆ ಗೊಬ್ಬರ ಮತ್ತು ಮರಳನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಬೇಕು ಡಿಸೆಂಬರ್ ಜನವರಿ ತಿಂಗಳಲ್ಲಿ ಪಡೆದ ಕಡ್ಡಿಗಳನ್ನು ತೇವಾಂಶವುಳ್ಳ ಮಣ್ಣಲ್ಲಿ 10:15 ಸೆಂಟಿಮೀಟರ್ ಆಳದಲ್ಲಿ ಹೊಳಬೇಕು. ಸೂಕ್ತ ಕನಸುಗಳನ್ನು ಅರಿಸಿ ಕಣ್ಣು ಕಸಿಯನ್ನು ಗುಡಿಸಬೇಕು.