ಮನೆ ಮನರಂಜನೆ RRR ಚಿತ್ರ ಬಿಡುಗಡೆ:  ರಾಮ್ ಚರಣ್, ಎನ್ ಟಿಆರ್ ಜೀವಮಾನ ಶ್ರೇಷ್ಠ ಪ್ರದರ್ಶನ ಎಂದ ತಜ್ಞರು

RRR ಚಿತ್ರ ಬಿಡುಗಡೆ:  ರಾಮ್ ಚರಣ್, ಎನ್ ಟಿಆರ್ ಜೀವಮಾನ ಶ್ರೇಷ್ಠ ಪ್ರದರ್ಶನ ಎಂದ ತಜ್ಞರು

0

ಬೆಂಗಳೂರು: ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ದೇಶಾದ್ಯಂತ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ RRR ಬಿಡುಗಡೆಯಾಗಿದ್ದು, ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

ದೇಶದ್ಯಾಂತ ಇಂದು RRR ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ 450 ಥಿಯೇಟರ್​ಗಳಲ್ಲಿ ರಿಲೀಸ್ ಆಗಿದ್ದು, ಈ ಪೈಕಿ 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್‌ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಇಡೀ ದಿನದ ಟಿಕೆಟ್ ಕೂಡ ಸೋಲ್ಡ್​ಔಟಾಗಿ, ನಾಳಿನ ಟಿಕೆಟ್​ಗೂ ಬೇಡಿಕೆ ಹೆಚ್ಚಾಗಿದೆ.

‘ಆರ್​ಆರ್​ಆರ್​’ ಚಿತ್ರವನ್ನು ಖ್ಯಾತ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಟಾಲಿವುಡ್​ ಚಿತ್ರರಂಗದ ಸೂಪರ್ ಸ್ಟಾರ್​ಗಳಾದ ಜೂನಿಯರ್ ಎನ್​ಟಿಆರ್ ಮತ್ತು ರಾಮ್ ಚರಣ್ ತೇಜ್ ನಾಯಕರಾಗಿ ಮಿಂಚಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಟಾಕಿ ಸಿಡಿಸಿ, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ

ಪಾವಗಡ ಪಟ್ಟಣದ ಮಾರುತಿ‌ ಚಿತ್ರಮಂದಿರದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬೆಳಗಿನಜಾವ 3 ಗಂಟೆಗೆ 3ಆರ್ ಫ್ಯಾನ್ ಶೋ‌ ರಿಲೀಸ್ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಲಾಗಿದೆ. ಹುಬ್ಬಳ್ಳಿಯಲ್ಲೂ ಆರ್​ಆರ್​ಆರ್​ ಹವಾ ಜೋರಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 30 ಶೋ ಆರೆಂಜ್ ಮಾಡಲಾಗಿದೆ. ಎರಡೂ ಥಿಯೆಟರ್ ಹಾಗೂ ಎರಡೂ ಮಲ್ಟಿಪ್ಲೆಕ್ಸ್ ನಲ್ಲಿ ಆರ್ ಆರ್ ಆರ್ ಪ್ರದರ್ಶನ ಕಾಣುತ್ತಿದೆ. ಸುಧಾ ಹಾಗೂ ಶೃಂಗಾರ ಥಿಯೇಟರ್​ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಇತ್ತ ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್​ನಲ್ಲಿ ತಲಾ 10 ಶೋಗಳು ನಡೆಯುತ್ತಿವೆ. ಬೆಳಿಗ್ಗೆ 9ಕ್ಕೆ ಮೊದಲ ಶೋ ಆಯೋಜನೆಯಾಗಿದ್ದು, ಈಗಾಗಲೇ ಮೊದಲ ಶೋ ಟಿಕೆಟ್ ಸೋಲ್ಡ್ ಔಟ್ ಆಗಿವೆ.